Astrology
oi-Sunitha B

ಶಶ ಮಹಾಪುರುಷ ಯೋಗ: ನವಗ್ರಹಗಳಲ್ಲಿ ಶನಿಯು ಅತ್ಯಂತ ಶಕ್ತಿಶಾಲಿ ಗ್ರಹವೆಂದು ಪರಿಗಣಿಸಲಾಗಿದೆ. ಗ್ರಹಗಳಲ್ಲಿ ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿರುವುದರಿಂದ ಜೀವನದ ಮೇಲೆ ಶನಿಯ ಪ್ರಭಾವವು ಸ್ವಲ್ಪ ಹೆಚ್ಚು ಇರುತ್ತದೆ.
ಶನಿ ದೇವರು ಒಬ್ಬರ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡಬಹುದು. ಹಾಗಾಗಿ ಪಾಪ ಮಾಡುವವರು ಖಂಡಿತಾ ಶನಿದೇವನ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಿಲ್ಲ. ಅದೇ ರೀತಿ ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ಅವರಿಗೆ ಶನಿ ದೇವರ ಆಶೀರ್ವಾದ ಸಿಗುತ್ತದೆ.

ಅಧಿಪತಿ ಶನಿಯು ಜನವರಿ 2023 ರಲ್ಲಿ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿ 2025ರವರೆಗೆ ಈ ಕುಂಭ ರಾಶಿಯಲ್ಲಿ ಸಂಚರಿಸಲಿದೆ. ಅಧಿಪತಿ ಶನಿಯು ಕುಂಭ ರಾಶಿಯಲ್ಲಿರುವುದರಿಂದ ಅತ್ಯಂತ ಶಕ್ತಿಯುತವಾದ ಶಶ ಮಹಾಪುರುಷ ಯೋಗವು ರೂಪುಗೊಳ್ಳುತ್ತದೆ.
ಈ ಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಹಾನಿಕಾರಕವಾಗಿದ್ದರೂ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಇದು ಅನೇಕ ಅನಿರೀಕ್ಷಿತ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಶಾಶ ಮಹಾಪುರುಷ ಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಈಗ ನೋಡೋಣ.
ಶಶ ಮಹಾಪುರುಷ ಯೋಗ ಯಾವಾಗ ಇರುತ್ತದೆ?
ಶಶ ಮಹಾಪುರುಷ ಯೋಗವು ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾಗಿದೆ. ಶನಿಯು ಉಚ್ಛಸ್ಥಾನದಲ್ಲಿದ್ದಾಗ ಅಥವಾ ಚಂದ್ರನ ಕೇಂದ್ರದಲ್ಲಿದ್ದಾಗ ಅಥವಾ ಶನಿಯು ತುಲಾ, ಮಕರ ಮತ್ತು ಕುಂಭ ರಾಶಿಗಳಲ್ಲಿ 1, 4, 7, 10 ನೇ ಮನೆಗಳಲ್ಲಿದ್ದರೆ ಈ ಯೋಗವು ರೂಪುಗೊಳ್ಳುತ್ತದೆ.
ಕುಂಭ ರಾಶಿಯ ಮೊದಲ ಮನೆಯಲ್ಲಿ ಶನಿಯು ಈಗ ಇರುವುದರಿಂದ ಶಶ ಮಹಾಪುರುಷ ಯೋಗ ರೂಪುಗೊಳ್ಳುತ್ತದೆ. ಈಗ ಶಶ ಮಹಾಪುರುಷ ಯೋಗದಿಂದ 2025 ರ ವರೆಗೆ ಯಾವ ರಾಶಿಯವರು ಅದ್ಬುತವಾಗಿರಲಿದ್ದಾರೆ ಎಂದು ನೋಡೋಣ.

ಮೇಷ ರಾಶಿ: ಶಶ ಮಹಾ ಪುರುಷ ಯೋಗ ಮೇಷ ರಾಶಿಯವರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಮುಖ್ಯವಾಗಿ ಉದ್ಯೋಗಸ್ಥರು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣುತ್ತಾರೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಜೊತೆಗೆ ಉತ್ತಮ ಲಾಭವನ್ನು ಶಶ ಮಹಾ ಪುರುಷ ಯೋಗ ತರುತ್ತವೆ. ನೀವು ಇಲ್ಲಿಯವರೆಗೆ ಹಣದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈಗ ಹಣದ ಸಮಸ್ಯೆಗಳು ಪರಿಹಾರವಾಗುತ್ತವೆ ಮತ್ತು ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಶನಿದೇವರ ಶಶ ಮಹಾಪುರುಷ ಯೋಗವೂ ಶುಭವಾಗಲಿದೆ. ವಿಶೇಷವಾಗಿ ಉದ್ಯಮ ಮತ್ತು ವ್ಯಾಪಾರದಲ್ಲಿ ಉತ್ತಮ ಪ್ರಗತಿ ಇರುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲ ವೃಷಭ ರಾಶಿಯವರಿಗೆ ಇರಲಿದೆ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಉತ್ತಮ ಯಶಸ್ಸನ್ನು ಕಾಣುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪುನರಾರಂಭಿಸಿ ಉತ್ತಮವಾಗಿ ಪೂರ್ಣಗೊಳಿಸಲಾಗುವುದು. ನಿಮ್ಮ ಆರ್ಥಿಕ ಸ್ಥಿತಿ ಇಲ್ಲಿಯವರೆಗೆ ದುರ್ಬಲವಾಗಿದ್ದರೆ, 2025 ರ ತನಕ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ.

ಕನ್ಯಾ ರಾಶಿ: ಶಶ ಮಹಾಪುರುಷ ಯೋಗ ಕನ್ಯಾ ರಾಶಿಯವರಿಗೆ ಅಪಾರ ಲಾಭವನ್ನು ನೀಡುತ್ತದೆ. ಜೊತೆಗೆ ಈ ರಾಶಿಚಕ್ರದವರ ಧೈರ್ಯವನ್ನು ಹೆಚ್ಚಿಸುತ್ತದೆ. ಈ ಧೈರ್ಯದಿಂದ ನೀವು ಅನೇಕ ಸವಾಲುಗಳನ್ನು ಯಶಸ್ವಿಯಾಗಿ ಜಯಿಸುತ್ತೀರಿ. ಉನ್ನತ ಅಧಿಕಾರಿಗಳು ಕೆಲಸದಲ್ಲಿ ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯಿಂದ ಪ್ರಭಾವಿತರಾಗುತ್ತಾರೆ ಮತ್ತು ನಿಮಗೆ ಬಡ್ತಿ ನೀಡುತ್ತಾರೆ. ವ್ಯಾಪಾರ ಮಾಡುವವರು ಉತ್ತಮ ಲಾಭವನ್ನು ಕಾಣುವರು.

ಕುಂಭ ರಾಶಿ: ಶನಿಯು ಕುಂಭ ರಾಶಿಯವರಿಗೆ ಎಂದಿಗೂ ಹಾನಿ ಮಾಡುವುದಿಲ್ಲ. ಏಕೆಂದರೆ ಅದು ಕುಂಭ ರಾಶಿಯ ಅಧಿಪತಿಯಾಗಿದೆ. ಹೀಗಾಗಿ ಕುಂಭ ರಾಶಿಯವರಿಗೆ ಶಶ ಮಹಾಪುರುಷ ಯೋಗ ಶುಭವಾಗಲಿದೆ. ಕುಟುಂಬದೊಂದಿಗೆ ಸಂತೋಷವಾಗಿ ಸಮಯ ಕಳೆಯುವ ಅವಕಾಶ ಸಿಗಲಿದೆ. ವೈವಾಹಿಕ ಜೀವನದಲ್ಲಿನ ಉದ್ವಿಗ್ನತೆ ದೂರವಾಗುತ್ತದೆ ಮತ್ತು ದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚಾಗುತ್ತದೆ. ಹಣಕಾಸಿನ ಸ್ಥಿತಿಯು ಸಾಮಾನ್ಯಕ್ಕಿಂತ ಸ್ವಲ್ಪ ಬಲವಾಗಿರುತ್ತದೆ. ನೀವು ಇಲ್ಲಿಯವರೆಗೆ ಯಾವುದಾದರೂ ಹೂಡಿಕೆ ಮಾಡಿದ್ದರೆ, ಅದರಿಂದ ನಿಮಗೆ ಉತ್ತಮ ಆದಾಯ ಸಿಗುತ್ತದೆ.
English summary
Shash Mahapurusha yoga started by Shani will bring good fortune till 2025 for the sign.