
ಮೇಷ
ಈ ರಾಶಿಯಲ್ಲಿ ರಾಹು, ಬುಧ, ಶುಕ್ರರು ಇದ್ದಾರೆ. 12ನೇ ಮನೆಯಲ್ಲಿ ಸೂರ್ಯ-ಗುರು, 11ರಲ್ಲಿ ಶನಿ, ಮೂರರಲ್ಲಿ ಮಂಗಳ 7ರಲ್ಲಿ ಕೇತು ಇದ್ದಾರೆ. 11ರ ಶನಿ ನಿಮಗೆ ಲಾಭದಾಯಕ, ನಾನಾ ಮೂಲಗಳಿಂದ ಧನ ಸಹಾಯ ಒದಗಿಸುತ್ತಾನೆ. ಯಾವುದೇ ಕೆಲಸ ಕಾರ್ಯ ಸುಲಭದಲ್ಲಿ ಆಗುವಂತೆ ಮಾಡುತ್ತಾನೆ. ಬಾಕಿ ಉಳಿದಿರುವ ಕೆಲಸಗಳ ಅಡೆತಡೆಗಳನ್ನು ನಿವಾರಣೆ ಮಾಡುತ್ತಾನೆ. ಸಾಮಾಜಿಕವಾಗಿ ಕೀರ್ತಿ ಗೌರವಗಳನ್ನು ತಂದುಕೊಡುತ್ತಾನೆ. ವಿದೇಶ ಪ್ರವಾಸ ಅಥವಾ ಒಳ್ಳೆಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದು ಮುಂತಾದ ಸಂತೋಷಕರ ಸಂಗತಿಗಳು ಸಂಭವಿಸುವ ಸಾಧ್ಯತೆಗಳಿವೆ.
ನಿಮ್ಮ ರಾಶಿಯಲ್ಲೇ ಇರುವ ಬುಧ ಮತ್ತು ಶುಕ್ರ ಯಾವುದೇ ಅಪಾಯವಾಗದಂತೆ ಕಾಪಾಡುತ್ತಾರೆ. ಐಷಾರಾಮಿ ವಸ್ತುಗಳಿಗಾಗಿ ಅಧಿಕ ಖರ್ಚು ಮಾಡುತ್ತೀರಿ. ಮೂರನೇ ಮನೆಯಲ್ಲಿ ಇರುವ ಮಂಗಳ ನಿಮಗೆ ಧೈರ್ಯವನ್ನು ಕೊಡುತ್ತಾನೆ. ರಿಯಲ್ ಎಸ್ಟೇಟ್‌ನಲ್ಲಿರುವವರಿಗೆ ಇದು ಒಳ್ಳೆಯ ಆದಾಯ ಬರುವ ಕಾಲವಾಗಿದೆ. ವಿದ್ಯುತ್ ಉಪಕರಣ ತಯಾರಿಸುವವರು ಮಾರಾಟ ಮಾಡುವವರು ಇಬ್ಬರಿಗೂ ಈಗ ಒಳ್ಳೆಯ ಕಾಲ. 12ನೇ ಮನೆಯಲ್ಲಿರುವ ಗುರು ದಾನಧರ್ಮ,ದೈವಕಾರ್ಯ ಮೊದಲಾದ ಪುಣ್ಯ ಕೆಲಸಗಳನ್ನು ಮಾಡಿಸುತ್ತಾನೆ. 12ನೇ ಮನೆಯಲ್ಲಿ ಇರುವ ಸೂರ್ಯ ಸರ್ಕಾರದಿಂದ ಆಗುವ ಕೆಲಸಗಳು ನಿಧಾನ ಮಾಡಿಸುತ್ತಾನೆ. ಸರ್ಕಾರಿ ನೌಕರರಿಗೂ ವೃಥಾ ಅಲೆದಾಟ ಹಣದ ಖರ್ಚು ಇರುತ್ತದೆ. 22ಕ್ಕೆ ಗುರು ನಿಮ್ಮ ರಾಶಿಗೆ ಬಂದಾಗ ಹಣಕಾಸಿನ ವಿಷಯದಲ್ಲಿ ಕೊಂಚ ಇಕ್ಕಟ್ಟಿನ ಅನುಭವ ಆಗುತ್ತದೆ.
ಶುಭ ಸಂಖ್ಯೆ: 9 ಶುಭವರ್ಣ: ಕೆಂಪು. ಶುಭರತ್ನ: ಹವಳ

ವೃಷಭ
ಈ ರಾಶಿಯಲ್ಲಿ ಹನ್ನೊಂದರಲ್ಲಿ ಗುರು ಇರುವುದರಿಂದ ಕೆಲಸ ಕಾರ್ಯಗಳು ಸರಳವಾಗಿ ನಡೆಯುತ್ತದೆ. ಹಣದ ಹರಿವು ಉತ್ತಮವಾಗಿದೆ. ವೃತ್ತಿಯಲ್ಲಿ ಪ್ರಗತಿ ಇದೆ. 12ನೇ ಮನೆಯಲ್ಲಿ ಬುಧ,ಶುಕ್ರ ಮತ್ತು ರಾಹು ಇರುವುದರಿಂದ ಖರ್ಚು ಹೆಚ್ಚಾಗುತ್ತದೆ. ಏ.6ರಂದು ಶುಕ್ರ ನಿಮ್ಮ ರಾಶಿಗೆ ಪ್ರವೇಶವಾದಾಗ ನಿಮಗೆ ಅದೃಷ್ಟ ತರುತ್ತದೆ. ನಿಮಗೆ ಶುಕ್ರ ಬಹಳ ಶುಭಫಲಗಳನ್ನು ಕೊಡುತ್ತಾನೆ. ಕಲಾವಿದರಿಗೂ ಕೀರ್ತಿ ಯಶಸ್ಸು ಇದೆ. ಎರಡನೇ ಮನೆಯಲ್ಲಿ ಕುಜ ಮಿಶ್ರಫಲ ನೀಡುತ್ತಾನೆ. ಕೊಂಚ ಅಶಾಂತಿ ಕೊಂಚ ಲಾಭ ಇರುತ್ತದೆ. 11ರ ಸೂರ್ಯ ನಿಮಗೆ ಸವಾಲುಗಳು ಎದುರಿಸುವ ಶಕ್ತಿಯನ್ನು ಕೊಡುತ್ತಾನೆ. ಮುಂದೆ ಏಪ್ರಿಲ್14ರಂದು ಸೂರ್ಯ 12ನೇ ಮನೆಗೆ ಬಂದಾಗ ಸರ್ಕಾರದಿಂದ ಆಗಬೇಕಾದ ಕೆಲಸ ಕಾರ್ಯಗಳು ವಿಳಂಬ ಗತಿಯಲ್ಲಿ ಸಾಗುತ್ತವೆ. ರಾಜಕಾರಣಿಗಳಿಗೂ ಕೊಂಚ ಹಿನ್ನಡೆ ಇರುತ್ತದೆ. ಹತ್ತನೇ ಮನೆಯ ಶನಿ ನಿಮ್ಮ ಪಾಲಿಗೆ ತಟಸ್ಥ. ಆರರಲ್ಲಿ ಕೇತು 2023ಅಕ್ಟೋಬರ್ ವರೆಗೂ ಇದ್ದು ನಿಮ್ಮ ದೈಹಿಕ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತಾನೆ. ನೀವು ಇಷ್ಟಪಟ್ಟಿದ್ದು ಕೊಳ್ಳುವ ಸಾಮರ್ಥ್ಯ ಇರುತ್ತದೆ. ಏಪ್ರಿಲ್ 22ರಂದು ಗುರು ಮೇಷರಾಶಿಗೆ ಪ್ರವೇಶವಾದಾಗ ಕೊಂಚ ಹಿನ್ನಡೆ ಇದೆ. ಹಣಕಾಸಿನ ಸ್ಥಿತಿ ಜಾತನದಿಂದ ನಿಭಾಯಿಸಿಕೊಳ್ಳಿ. ಸಕಾರಿ ಉದ್ಯೋಗದಲ್ಲಿ ಇರುವವರಿಗೆ ವರ್ಗಾವಣೆ ಸಾಧ್ಯತೆ ಇದೆ. ಸ್ವಂತ ಮನೆ ಕೊಳ್ಳುವ ಇಚ್ಛೆ ಇದ್ದವರಿಗೆ ಮತ್ತು ಅವಿವಾಹಿತರಿಗೆ ಈಗ ಶುಭಕಾಲ.
ಶುಭವರ್ಣ: ಬಿಳಿ ಶುಭಸಂಖ್ಯೆ: 6 ಶುಭರತ್ನ: ವಜ್ರ

ಮಿಥುನ
ಒಳ್ಳೆಯ ಸಂಗತಿಗಳನ್ನು ಎದುರುಗೊಳ್ಳಲು ಸಿದ್ದರಾಗಿ. ಅಷ್ಟಮ ಶನಿಯ ಪ್ರಭಾವದಿಂದ ಬಹಳ ಕಷ್ಟ ಪಟ್ಟಿರುವ ನಿಮಗೆ ಈಗ ಅಷ್ಠಮ ಶನಿಯ ಪ್ರಭಾವ ಕೊಂಚ ಕಡಿಮೆಯಾಗಿದೆ. ಏ.22ರಂದು ಗುರು ಹನ್ನೊಂದನೇ ಮನೆಗೆ ಪ್ರವೇಶ ಮಾಡುತ್ತಾನೆ. ನಂತರ ನಿಮ್ಮ ಜೀವನದ ಗತಿಯೇ ಬದಲಾಗಲಿದೆ. ಭಾಗ್ಯದ ಬಾಗಿಲು ತೆರೆಯುತ್ತದೆ. ಅನುಭವಿಸಿದ ಕಷ್ಟಗಳು ಮರೆಯಾಗಿ ಹೋಗುವ ಶುಭ ಸಮಾಚಾರ ಕೇಳಲಿದ್ದಿರಿ. 15ರ ನಂತರ ಸೂರ್ಯ ಮೇಷರಾಶಿಗೆ ಪ್ರವೇಶ ಮಾಡುತ್ತಾನೆ. ಈಗಾಗಲೇ ರಾಹು ಹನ್ನೊಂದನೇ ಮನೆಯಲ್ಲಿದ್ದಾನೆ. ಹಾಗಾಗಿ ಏಪ್ರಿಲ್ 14ರಿಂದ ಸೂರ್ಯನು ಮೇಷದಲ್ಲಿ ಇರುವ ವರೆಗೂ ಹನ್ನೊಂದನೇ ಮನೆ ನಿಮಗೆ ಒಂದು ರಾಜಯೋಗ ತಂದುಕೊಡುತ್ತದೆ. ಈ ಸಮಯದಲ್ಲಿ ಜನ್ಮ ಜಾತಕಗಳ ಅನುಸಾರ ಪವಾಡಗಳೇ ನಡೆಯಬಹುದು. ಮಿಥುನ ರಾಶಿಯವರಿಗೆ ಈ ತಿಂಗಳು ಅದೃಷ್ಟವೋ ಅದೃಷ್ಟ. ಹನ್ನೊಂದನೇ ಮನೆಯಲ್ಲಿ 22ರ ನಂತರ ನಾಲ್ಕು ಗ್ರಹಗಳು ಸಂಯೋಗವಾಗಿ ನಿಮಗೆ ಒಂದು ರಾಜಯೋಗವನ್ನು ಕೊಡುತ್ತದೆ. 11ನೇ ಮನೆ ಲಾಭಸ್ಥಾನ, ಇಲ್ಲಿ ಯಾವುದೇ ಗ್ರಹ ಇದ್ದರೂ ಹಣವನ್ನು ಕೊಡುತ್ತಾರೆ. ಬಾಕಿಯಂತೆ ಐದನೇ ಮನೆಯಲ್ಲಿ ಕೇತು ಇರುವುದು ವಿದ್ಯಾರ್ಥಿಗಳಿಗೆ ತೊಂದರೆ. ನಿಮ್ಮ ರಾಶಿಯಲ್ಲೇ ಕುಜ ಇರುವುದು ಕೊಂಚ ಅನಾರೋಗ್ಯಕ್ಕೆ ಕಾರಣ ಆಗಬಹುದು.
ಶುಭವರ್ಣ: ಹಸಿರು. ಶುಭಸಂಖ್ಯೆ: 5 ಶುಭರತ್ನ: ಮರಕತ ಪಚ್ಛೆ

ಕಟಕ
ಈ ರಾಶಿ ಜನರಿಗೆ ಗ್ರಹಗತಿಗಳು ಅಷ್ಟು ಅನುಕೂಲಕರವಾಗಿಲ್ಲ. ಅಷ್ಟಮ ಶನಿಯ ಪ್ರಭಾವ ನಿಮ್ಮನ್ನು ಕಂಗೆಡಿಸುತ್ತಿದೆ. ಹಣಕಾಸು ಸ್ಥಿತಿ ಗಂಭೀರವಾಗುತ್ತದೆ. ಹಣ ಬರುವುದಕ್ಕೂ ಖರ್ಚಾಗುವುದಕ್ಕೂ ತಾಳ-ಮೇಳ ಇಲ್ಲದಂತೆ ಆಗಿದೆ. ಅನಾರೋಗ್ಯದ ಬಿಸಿಯೂ ಇದೆ. ಆದರೂ 22ರ ತನಕ ಗುರುಬಲ ಇದ್ದು ನಿಮ್ಮನ್ನು ಕಾಪಾಡುತ್ತದೆ. ಆದರೆ 22ನಂತರ ಗುರುಬಲ ಕಡಿಮೆ ಆಗುವುದರಿಂದ ನಷ್ಟಗಳು ಹೆಚ್ಚು ಲಾಭ ಕಡಿಮೆ ಆಗುತ್ತದೆ. ಈ ರಾಶಿಯ ಯಾವುದೇ ಉದ್ಯೋಗ ವ್ಯಾಪಾರ ಮಾಡುವವರೂ ಈಗ ನಷ್ಟಗಳನ್ನು ಅನುಭವಿಸುತ್ತಾರೆ. ಕುಟುಂಬದಲ್ಲಿ ಅನಾರೋಗ್ಯ ಅಥವಾ ಜಗಳ,ಮನಸ್ತಾಪಗಳು ತಲೆದೋರಲಿದೆ. ಆದಷ್ಟು ವಾದ ಮಾಡಬೇಡಿ. ಮೇಲಾಧಿಕಾರಿಗಳೊಂದಿಗೆ ಹಾಗೂ ಕುಟುಂಬದೊಂದಿಗೆ ಅನುಸರಿಸಿಕೊಂಡು ಹೋಗಿ. ಏ.15 ರ ನಂತರ ನಿಮಗೆ ವೃತ್ತಿಯಲ್ಲಿ ಒತ್ತಡ ಹೆಚ್ಚಾಗುತ್ತದೆ. ನಿಮಗೆ ಬೇಡದ ಜಾಗಕ್ಕೆ ವರ್ಗಾವಣೆ ಆಗಬಹುದು. ವೃಥಾ ಆರೋಪಗಳು, ಕೆಟ್ಟಹೆಸರೂ ಬರಬಹುದ. ನೀವು ಯಾವಾಗಲೋ ಅರಿಯದೆ ಮಾಡಿದೆ ಒಂದು ತಪ್ಪು ಈಗ ಬೃಹದಾಕಾರವಾಗಿ ನಿಂತು ನಿಮ್ಮನ್ನು ಕಂಗೆಡಿಸಬಹುದು. ಭಯ ಪಡಬೇಡಿ. ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸ ಹೇಳಿಕೊಳ್ಳಿ. ಕಪ್ಪು ಹಸುವಿಗೆ ಆಹಾರ ಕೊಡಿ.
ಶುಭವರ್ಣ: ಬಿಳಿ ಶುಭಸಂಖ್ಯೆ: 2 ಶುಭರತ್ನ: ಮುತ್ತು

ಸಿಂಹ
ಈ ರಾಶಿ ಜನರಿಗೆ ಈಗ ಗುರುಬಲ ಇಲ್ಲ. ಕೆಲಸಕಾರ್ಯಗಳನ್ನು ನಿಧಾನ ಗತಿಯಿಂದ ಸಾಗುತ್ತವೆ. ಆದರೆ ಏ.22ನಂತರ ಗುರು ನಿಮ್ಮ ರಾಶಿಯ ಎಂಟನೇ ಮನೆಯಿಂದ ಒಂಬತ್ತನೇ ಮನೆಗೆ ಪ್ರವೇಶವಾಗುತ್ತಾನೆ. ಭಾಗ್ಯದ ಮನೆಗೆ ಗುರುವಿನ ಪ್ರವೇಶ ಭಾಗ್ಯೋದಯವನ್ನು ಉಂಟು ಮಾಡುತ್ತದೆ. ಅದಕ್ಕೆ ಪೂರಕವಾಗಿ ಲಾಭಸ್ಥಾನದಲ್ಲಿ ಕುಜ ಇದ್ದು ನಿಮಗೆ ಧನಲಾಭ ಮಾಡಿಸುತ್ತಾನೆ. ಧೈರ್ಯ ಸಾಹಸಗಳನ್ನು ಹೆಚ್ಚು ಮಾಡುತ್ತಾನೆ. ಮುನ್ನುಗ್ಗುವ ಕೆಚ್ಚು ಕೊಡುತ್ತಾನೆ. ಈ ರಾಶಿಯ ರಾಜಕೀಯ ವ್ಯಕ್ತಿಗಳಿಗೆ 22ರ ನಂತರ ತುಂಬಾ ಶುಭಫಲಗಳು ಇವೆ. ಕ್ರೀಡಾಪಟುಗಳಿಗೂ ಈ ಮಾಸ ಒಳ್ಳೆಯದು. ಹೊಸ ಹೊಸ ಯೋಜನೆಗಳು ನಿಮ್ಮನ್ನು ಹುಡುಕಿ ಬರುತ್ತದೆ. ವಿದೇಶ ಪ್ರವಾಸ ಯೋಗ ಇದೆ. ಬಂಧುಬಳಗದಲ್ಲಿ ಒಳ್ಳೆಯ ಹೆಸರು ಮರ್ಯಾದೆ ಗೌರವಗಳಿಗೆ ಪಾತ್ರರಾಗುತ್ತೀರಿ. ಶನಿ ಏಳನೇ ಮನೆಯಲ್ಲಿ ಇರುವುದು ಅಷ್ಟೊಂದು ಶುಭವಲ್ಲದಿದ್ದರೂ ಗುರುಬಲ ಬರುವುದರಿಂದ ಶನಿಯ ಪ್ರಭಾವ ನಿಮ್ಮ ಮೇಲೆ ಅಷ್ಟಾಗಿ ಇರುವುದಿಲ್ಲ. ಏ.15ರ ನಂತರ ಒಂಬತ್ತನೇ ಮನೆಯಲ್ಲಿ ಒಂದು ರಾಜಯೋಗ ಆಗುತ್ತದೆ. ಇದು ನಿಮ್ಮ ಭಾಗ್ಯದ ಬಾಗಿಲನ್ನು ತೆರೆಸುತ್ತದೆ. ತುಂಬಾ ಮಹತ್ಕಾರ್ಯಗಳನ್ನು ಮಾಡುತ್ತೀರಿ. ದೈವಕಾರ್ಯ ಮಾಡುತ್ತೀರಿ. ದೈವದ ಅನುಗ್ರಹ ಪಡೆಯುತ್ತೀರಿ. ಹೊಸ ಆಸ್ತಿ ಭೂಮಿ ಕೊಳ್ಳುವ ಯೋಗ ಇದೆ. ಮೂರನೇ ಮನೆಯ ಕೇತು ಸಹ ನಿಮಗೆ ಬೆಂಬಲವಾಗಿ ಇದ್ದಾನೆ. ಏ.6ರ ನಂತರ ಹತ್ತನೇ ಮನೆಗೆ ಶುಕ್ರ ಪ್ರವೇಶವಾಗುವುದೂ ಕೂಡ ನಿಮಗೆ ವೃತ್ತಿಯಲ್ಲಿ ಶುಭಫಲಗಳನ್ನು ನೀಡುತ್ತದೆ.
ಶುಭವರ್ಣ: ಕೇಸರಿ ಶುಭಸಂಖ್ಯೆ: 1 ಶುಭರತ್ನ: ಮಾಣಿಕ್ಯ

ಕನ್ಯಾ
ಈ ರಾಶಿಗೆ 22ರಂದು ಏಳನೇ ಮನೆಯ ಗುರು ಎಂಟನೇ ಮನೆಗೆ ಬರುತ್ತಾನೆ 14ಕ್ಕೆ ಸೂರ್ಯನೂ ಎಂಟನೇ ಮನೆಗೆ ಬರುತ್ತಾನೆ. ಈಗಾಗಲೇ ರಾಹು ಎಂಟನೇ ಮನೆಯಲ್ಲಿ ಇದ್ದಾನೆ. ಬುಧನೂ ಎಂಟನೇ ಮನೆಯಲ್ಲೇ ಇದ್ದಾನೆ. ನಾಲ್ಕು ಗ್ರಹಗಳು ಎಂಟನೇ ಮನೆಯಲ್ಲಿ ಸಂಯೋಗವಾಗಿದೆ. ಇದು ಅಷ್ಟೇನೂ ಶುಭಫಲ ನೀಡುವುದಿಲ್ಲ. ಆದರೆ ನಿಮ್ಮ ರಾಶಿಯ ಅಧಿಪತಿ ಬುಧಕೂಡ ಎಂಟನೇ ಮನೆಯಲ್ಲಿ ಇರುವುದು ನಿಮಗೆ ಕೊಂಚ ರಕ್ಷೆಯಾಗಿ ಇರುತ್ತದೆ. ಇದುವರೆಗೂ ನೀವು ಎಲ್ಲಾ ಕೆಲಸ ಕಾರ್ಯಗಳಲ್ಲೂ ಜಯವನ್ನೂ ಯಶಸ್ಸನ್ನೂ ವೃತ್ತಿಯಲ್ಲಿ ಏಳಗಗೆಯನ್ನೂ ಕಂಡಿದ್ದೀರಿ. ಈಗ ಗುರುಬಲ ಕಡಿಮೆ ಆಗುವುದರಿಂದ ಜೀವನ ನಿಧಾನಗತಿಯಲ್ಲಿ ಸಾಗುತ್ತದೆ. ಕೆಲಸಕಾರ್ಯಗಳಲ್ಲಿ ವಿಳಂಬ, ಅಡ್ಡಿ ಆತಂಕಗಳನ್ನು ಎದುರಿಸುತ್ತೀರಿ. ಆರೋಗ್ಯ ಕೈಕೊಡುತ್ತದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಸಾಧ್ಯವಾದರೆ ಒಂದು ನವಗ್ರಹ ಶಾಂತಿಹೋಮವನ್ನು ಮಾಡಿಸಿ. ಹತ್ತರಲ್ಲಿ ಕುಜ ಶತ್ರುರಾಶಿಯಲ್ಲಿ ಇರುವುದರಿಂದ ವೃತ್ತಿಯಲ್ಲಿ ಸಣ್ಣಪುಟ್ಟ ಕಿರಿಕಿರಿಗಳಾಗುತ್ತದೆ. ಎರಡನೇ ಮನೆಯಲ್ಲಿ ಕೇತು ಇರುವುದರಿಂದ ನೀವು ಮಾತನಾಡುವಾಗ ಎಚ್ಚರ ವಹಿಸಬೇಕು. ಜಗಳಕ್ಕೆ ಆಸ್ಪದವಾಗುವಂಥ ಮಾತುಗಳನ್ನಾಡಬಾರದು. ಈ ತಿಂಗಳು ನಿಮಗೆ ಲಾಭ ಕಡಿಮೆ ಒತ್ತಡ ಹೆಚ್ಚು. ದೇವರ ಧ್ಯಾನ ಮಾಡಿ. ಗುರುಗಳ ದರ್ಶನ ಮಾಡಿ.
ಶುಭವರ್ಣ: ಹಸಿರು ಶುಭಸಂಖ್ಯೆ: 5 ಶುಭರತ್ಮ : ಮರಕತ ಪಚ್ಛೆ

ತುಲಾ
ಈಗಾಗಲೇ ನೀವು ಪಂಚಮ ಶನಿಯ ಪ್ರಭಾವವನ್ನು ಅನುಭವಿಸುತ್ತಿದ್ದೀರಿ. ಗುರುಬಲವೂ ಇಲ್ಲ. ಕುಟುಂಬದಲ್ಲಿ ಅಶಾಂತಿಯ ವಾತಾವರಣ ವಿನಾಕಾರಣ ಮನಸ್ತಾಪ ಜಗಳ ಹಣಕಾಸಿನ ಸಮಸ್ಯೆ ವೃತ್ತಿಯಲ್ಲಿ ನಿಧಾನ ಪ್ರಗತಿ ಮುಂತಾದವನ್ನು ಎದುರಿಸುತ್ತಿದ್ದೀರಿ. ಏನೋ ಅನುಮಾನ ನಿಮಗೆ ಕಾಡಿಸುತ್ತದೆ. ಆಪ್ತರೊಡನೆಯೇ ಮನಸ್ಥಾಪ ಭಯ ಸಂಶಯಗಳು ಕಾಡುತ್ತಿವೆ. ಯಾರನ್ನೂ ನಂಬದಂತಹ ಪರಿಸ್ಥಿತಿ. ಈಗ 22ಕ್ಕೆ ಗುರು ಏಳನೇ ಮನೆಗೆ ಪ್ರವೇಶವಾದಾಗ ಪಂಚಮ ಶನಿಯ ಪ್ರಭಾವ ಇದ್ದರೂ ಗುರುಬಲ ಬರುವುದರಿಂದ ಪರಿಸ್ಥಿಗಳು ಹತೋಟಿಗೆ ಬರಲಿದೆ. ಹೊಸ ಕೆಲಸ ಸಿಗುತ್ತದೆ. ಅವಿವಾಹಿತರಿಗೆ ವಿವಾಹಭಾಗ್ಯ ಇದೆ. ಈಗ ಸುಮಾರು ಮೂರು ವರ್ಷದಿಂದ ಯಾವುದೇ ಕೆಲಕಾರ್ಯಗಳು ನಡೆಯದೇ ಜೀವನವೇ ನಿಂತ ನೀರಾಗಿದೆ. ಅಸ್ಥಿರ ವಾತಾವರಣ ಅನುಭವಿಸಿದ್ದೀರಿ. ಈಗ ಗುರುಬಲ ಬರುವುದರಿಂದ ಎಷ್ಟೋ ಸಮಸ್ಯೆಗಳು ಪರಿಹಾರ ಆಗುತ್ತದೆ. ಮೇಲಧಿಕಾರಿಗಳ ಪ್ರಶಂಸೆ, ಸಾಮಾಜಿಕ ಜೀವನದಲ್ಲಿ ಗೌರವ ಮನ್ನಣೆಗಳಿಗೆ ಪಾತ್ರರಾಗುತ್ತೀರಿ. ಪ್ರಶಸ್ತಿಗಳು ಸನ್ಮಾನಗಳು ನಿಮ್ಮ ಹುಡುಕಿ ಬರುತ್ತದೆ. ಆಸ್ತಿ ವಿವಾದ ಬಗೆಹರಿಯುತ್ತದೆ. ಕೋರ್ಟು ವ್ಯಾಜ್ಯಗಳು ನಿಮ್ಮ ಪರವಾಗಿ ಆಗುತ್ತದೆ. ರಾಜಕೀಯ ವ್ಯಕ್ತಿಗಳಿಗೂ ಈಗ ಶುಭಕಾಲ. ಚಿನ್ನಬೆಳ್ಳಿ ಆಭರಣ ವ್ಯಾಪಾರಿಗಳಿಗೂ ಶುಭಕಾಲ. ಒಂಬತ್ತರಲ್ಲಿ ಕುಜ ಪಿತ್ರಾರ್ಜಿತ ಆಸ್ತಿಯನ್ನು ಕೊಡಿಸುತ್ತಾನೆ. ಏಳನೇ ಮನೆಯಲ್ಲಿ ನಾಲ್ಕು ಗ್ರಹಗಳ ಸಂಯೋಗ ನಿಮಗೆ ಉತ್ತಮ ಫಲಗಳನ್ನು ನೀಡುತ್ತದೆ.
ಶುಭವರ್ಣ: ಬಿಳಿ ಶೂಭಸಂಖ್ಯೆ: 6 ಶುಭರತ್ನ: ವಜ್ರ

ವೃಶ್ಚಿಕ
ಈ ಮೂರುವರ್ಷಗಳಿಂದ ನೀವು ನಿಮಗೆ ಏನು ಬೇಕೋ ಅದನ್ನೆಲ್ಲ ಪಡೆದುಕೊಂಡಿದ್ದೀರಿ. ಸಮಯ ನಿಮಗೆ ಅನುಕೂಲವಾಗಿ ಇತ್ತು. ಶನಿಬಲ,ಗುರುಬಲ ಹಾಗೂ ರಾಹುಬಲಗಳ ಪ್ರಭಾವವನ್ನೂ ಚೆನ್ನಾಗಿ ಅನುಭವಿಸಿದ್ದೀರಿ. ಈಗ ಶನಿಬಲ ಇಲ್ಲ. ಇಷ್ಟು ಗುರುಬಲ ಇತ್ತು ಈಗ ಗುರು ಮುಂದಕ್ಕೆ ಚಲಿಸುತ್ತಾನೆ. 22ಕ್ಕೆ ಗುರು ಮೇಷರಾಶಿಯ ಪ್ರವೇಶ ನಿಮಗೆ ಅಷ್ಟೊಂದ ಶುಭದಾಯಕವಲ್ಲ. ರಭಸವಾಗಿ ಹರಿಯುತ್ತಿದ್ದ ನದಿಗೆ ಅಡ್ಡಲಾಗಿ ಒಂದು ದೊಡ್ಡ ಬಂಡೆ ಸಿಕ್ಕಿದಂತೆ ಆಗುತ್ತದೆ. ರಭಸ ಕಡಿಮೆಯಾಗುತ್ತದೆ. ಆದರೆ ಈಗ ರಾಹುಬಲ ಇದೆ. ಅದೊಂದು ಈಗ ನಿಮ್ಮನ್ನು ಕಾಪಾಡುತ್ತದೆ. ಹಣದ ಹರಿವು ಚೆನ್ನಾಗಿದೆ. ರಾಹು ಹಣವನ್ನು ಕೊಡುತ್ತಾನೆ. ಕೋರ್ಟು ವ್ಯಾಜ್ಯಗಳು ನಿಮಗೆ ವ್ಯತಿರಿಕ್ತವಾಗಿ ಆಗಬಹುದು ಕೊಂಚ ಮುಂದಕ್ಕೆ ಹಾಕಿ. ಮನೆಕಟ್ಟುತ್ತಿರುವವರು ಯಾವುದೇ ಹೊಸ ಯೋಜನೆ ಒಪ್ಪಿಕೊಂಡು ಆ ಕೆಲಸ ಮಾಡುತ್ತಿರುವವರು ಈಗ ಕೊಂಚ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಈ 14ಕ್ಕೆ ಸೂರ್ಯ ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಅದೂ ಸಹ ಶುಭಫಲ ನೀಡುತ್ತದೆ. ಸರ್ಕಾರದಿಂದ ಏನೇ ಕೆಲಸವಾಗಬೇಕಾದರೂ ಶೀಘ್ರಗತಿಯಲ್ಲಿ ನೆರವೇರುತ್ತದೆ. ಈ ರಾಶಿಯ ರಾಜಕೀಯ ವ್ಯಕ್ತಿಗಳಿಗೆ ಏಪ್ರಿಲ್ 14ರ ನಂತರ ಶುಭಫಲಗಳಿವೆ. ಎಂಟನೇ ಮನೆಯಲ್ಲಿ ಕುಜ ಇರುವುದು ಕ್ರೀಡಾಪಟುಗಳಿಗೆ ಹಿನ್ನಡೆ. ಯಾವುದಾದರೂ ಹೊಸ ಯೋಜನೆ ಇನ್ನೇನು ಸಿಕ್ಕಿತು ಎಂದುಕೊಂಡಾಗ ಕೈಜಾರಿ ಹೋಗುತ್ತದೆ. ನೀವು ಪ್ರತಿದಿನ ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.
ಶುಭವರ್ಣ: ಕೆಂಪು ಶುಭಸಂಖ್ಯೆ: 9 ಶುಭರತ್ನ: ಹವಳ

ಧನಸ್ಸು
ಈಗ ನಿಮಗೆ ಸಾಡೆಸಾತಿ ಶನಿಯ ಪ್ರಭಾವ ಮುಗಿದು ಶನಿ ಮೂರನೇ ಮನೆಗೆ ಬಂದಿದ್ದಾನೆ. ಶನಿಯ ಅನುಗ್ರಹವನ್ನು ಅನುಭವಿಸಿತ್ತಿದ್ದೀರಿ. ಶನಿ ಸಾಡೆಸಾತಿ ಸಮಯದಲ್ಲಿ ಎಷ್ಟು ಕಿರುಕುಳ ಕೊಡುವನೋ ಅಷ್ಟೇ ಸುಖಸೌಲಭ್ಯಗಳನ್ನೂ ಅವನ ಅನುಗ್ರಹದ ಸಮಯದಲ್ಲಿ ಪಡೆಯಬಹುದು. ಈಗ ನಿಮಗೆ ಒಂದು ವರ್ಷದಿಂದ ಗುರುಬಲ ಇಲ್ಲ. ಮುಂದೆ ಏಪ್ರಿಲ್ 22ರಂದು ಗುರು ನಿಮ್ಮ ರಾಶಿಯಿಂದ ಐದನೇ ಮನೆಗೆ ಪ್ರವೇಶವಾಗುತ್ತಾನೆ. ಗುರುಬಲ ಪ್ರಾರಂಭವಾಗುತ್ತದೆ. ಈಗ ನಿಮಗೆ ಶನಿಬಲ ಮತ್ತು ಗುರುಬಲ ಈ ವರ್ಷ ಪೂರ್ತಿ ಇರುತ್ತದೆ. ನಿಮ್ಮ ಕೆಲಸಕಾರ್ಯಗಳಲ್ಲಿ ವೇಗದ ಪ್ರಗತಿ, ವೃತ್ತಿಯಲ್ಲಿ ಯಶಸ್ಸು ಮನೆಯಲ್ಲಿ ಶುಭಕಾರ್ಯಗಳು ನಡೆಯುವುದು ಮುಂತಾದ ಶುಭ ಸಂಗತಿಗಳು ನಡೆಯುತ್ತದೆ. ಅವಿವಾಹಿತರಿಗೆ ವಿವಾಹಯೋಗ ಇದೆ. ಈಗ ಆರೇಳು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಜೀವನ ಈಗ ಚಾಲನೆ ಪಡೆದುಕೊಳ್ಳುತ್ತದೆ. ಕೋರ್ಟು ವ್ಯಾಜ್ಯಗಳು ನಿಮ್ಮ ಪರವಾಗಿ ತೀರ್ಪು ಬರುತ್ತದೆ. ವೃತ್ತಿಯಲ್ಲಿ ಬಡ್ತಿ ಇದೆ. ಹಣ ಸಂಪಾದನೆ ಚೆನ್ನಾಗಿದೆ. ಹೊಸ ಯೋಜನೆಗಳು ಕೈಗೆ ಬರುತ್ತದೆ. ವಿದೇಶಪ್ರಯಾಣ ಇದೆ. ಒಳ್ಳೆಯ ಊಟ ಉಪಾಹಾರ ಪ್ರವಾಸ ಮೊದಲಾದವು ಈಗ ಅನುಭವಿಸುತ್ತೀರಿ. ಕಳೆದುಹೋಗಿದ್ದ ಸಂಬಂಧಗಳು ಈಗ ಮತ್ತೆ ಹುಡುಕಿ ಬರುತ್ತದೆ. ನಿಮ್ಮನ್ನು ಅಪಮಾನಿಸಿದವರು ಈಗ ನಿಮ್ಮ ಬಳಿಯೇ ಬರುತ್ತಾರೆ. ಜೀವನ ಒಂದು ಹೊಸ ಬಗೆಯೆ ತಿರುವು ಪಡೆದುಕೊಳ್ಳುತ್ತದೆ. ಅಭಿವೃದ್ಧಿ ಯೋಗ ಇದೆ. ಆಸ್ತಿ ಕೊಳ್ಳುತ್ತೀರಿ. ಹೊಸ ಮನೆ ವಾಹನ ಖರೀದಿ ಮಾಡುತ್ತೀರಿ. ಈ ರಾಶಿಯ ರಾಜಕೀಯ ವ್ಯಕ್ತಿಗಳಿಗೂ ಏ.22 ನಂತರ ಬಹುದೊಡ್ಡ ಬದಲಾವಣೆ ಇದೆ.
ಶುಭವರ್ಣ: ಹಳದಿ ಶುಭಸಂಖ್ಯೆ: 3 ಶುಭರತ್ನ: ಕನಕಪುಷ್ಯರಾಗ

ಮಕರ
ಈಗ ನಿಮಗೆ ಶನಿ ನಿಮ್ಮ ರಾಶಿಯಿಂದ ಮುಂದಿನ ರಾಶಿಗೆ ಹೋಗಿರುವುದು ಎಷ್ಟೋ ರಿಲೀಫ್ ಸಿಕ್ಕಿದೆ. ಆದರೆ ನಿಮ್ಮ ತಾಪತ್ರಯಗಳು ಇನ್ನೂ ಮುಗಿದಿಲ್ಲ. ತಾಪತ್ರಯಗಳ ತೀಕ್ಷಣತೆ ಕಡಿಮೆಯಾಗಿದ್ದರೂ ಪೂರ್ತಿ ಬಿಡುಗಡೆ ಆಗಿಲ್ಲ. ಮನೆಯಲ್ಲಿ ಅಸಮಾಧಾನಕರ ವಾತಾವರಣ. ಕುಟುಂಬದವರೊಡನೆ ಮನಸ್ತಾಪ ಕಿರಿಕಿರಿ ಇರುತ್ತದೆ. ಮನಸ್ಸಿಗೆ ನಾನಾ ಚಿಂತೆಗಳು. ಮನಸ್ಸು ವ್ಯಾಕುಲವಾಗಿರುತ್ತದೆ. ಗುರು ನಿಮ್ಮ ನಾಲ್ಕನೇ ರಾಶಿಯ ಪ್ರವೇಶ ನಿಮಗೇನೂ ಅಷ್ಟು ಹಿತ ಇಲ್ಲ. ಆದರೆ ನಾಲ್ಕನೇ ಮನೆಯಲ್ಲಿ ನಾಲ್ಕು ಗ್ರಹಗಳ ಸಂಯೋಗ ನಿಮಗೆ ಒಂದು ಅನಿರೀಕ್ಷಿತ ತಿರುವನ್ನು ತಂದುಕೊಡುತ್ದೆ. ವೃತ್ತಿಯಲ್ಲಿ ಒಳ್ಳೆಯ ಬದಲಾವಣೆ ಇದೆ. ಈ ವರ್ಷದ ಕೊನೆಯಲ್ಲಿ ರಾಹುವಿನ ಬಲ ದೊರೆಯುತ್ತದೆ. ರಾಹುವಿನ ಬಲ ಇದ್ದರೆ ಹಣಕಾಸು ತೊಂದರೆ ಕಡಿಮೆ ಮಾಡುತ್ತಾನೆ. ಮೂರನೆ ಮನೆಯ ರಾಹು ಹಣದ ಹರಿವನ್ನು ಉತ್ತಮಪಡಿಸುತ್ತಾನೆ. ಯಾವುದಾದರೂ ಬಾಕಿಯಾಗಿದ್ದ ಕೆಲಸ ಮರು ಚಾಲನೆ ಪಡೆದು ಶುಭ ಫಲಿತಾಂಶ ನೀಡುತ್ತದೆ. ಈಗ ಏ.14ರ ವರೆಗೂ ಸೂರ್ಯ ಮೂರನೇ ಮನೆಯಲ್ಲಿ ಇರುವುದು ನಿಮಗೆ ಶುಭಫಲ ನೀಡುತ್ತದೆ. ಬುಧ ನಾಲ್ಕನೇ ಮನೆಯಲ್ಲಿ ಇರುವುದು ಸಹ ನಿಮ್ಮ ಬೆಳವಣಿಗೆಗೆ ಸಹಕಾರಿ. ವೈಯುಕ್ತಿಕವಾಗಿ ಮತ್ತು ವೃತ್ತಿಯಲ್ಲಿ ಅಭಿವೃದ್ಧಿ ಹೊಂದುತ್ತೀರಿ. ಏ.4 ರಂದು ಶುಕ್ರ ಐದನೇ ಮನೆಯಾದ ವೃಷಭರಾಶಿಗೆ ಪ್ರವೇಶವಾಗುತ್ತಾನೆ. ಇದು ಕೂಡ ನಿಮಗೆ ಶುಭಫಲ ನೀಡುತ್ತದೆ ಹೊಸ ನೌಕರಿ ಸಿಗುವುದು, ನೌಕರಿಯಲ್ಲಿ ಯಶಸ್ಸು ಧನಾಗಮನ ಮುಂತಾದ ಶುಭಫಲಗಳು ಇವೆ. ಆರರಲ್ಲಿ ಮಂಗಳ ವ್ಯವಸಾಯಗಾಗರರಿಗೆ ಶುಭಫಲಗಳನ್ನು ಕೊಡುತ್ತಾನೆ. ಭೂಮಿಯಿಂದ ಲಾಭ ಇದೆ.
ಶುಭವರ್ಣ: ನೀಲಿ ಶುಭಸಂಖ್ಯೆ: 8 ಶುಭರತ್ನ: ನೀಲ/ಪಚ್ಚೆ

ಕುಂಭ
ಈಗ ನಿಮಗೆ ಗುರು ಎರಡನೇ ಮನೆಯಲ್ಲಿ ಇದ್ದು ಸಾಕಷ್ಟು ಅನುಕೂಲಗಳನ್ನು ಕೊಟ್ಟಿದ್ದಾನೆ. ಈಗ ಗುರು ಮೂರನೇ ಮನೆಗೆ ಪ್ರವೇಶವಾಗುತ್ತಾನೆ. ಈಗ ಗುರುಬಲ ಕೊಂಚ ಕಡಿಮೆ ಯಾಗುತ್ತದೆ. ಶನಿ ನಿಮ್ಮ ರಾಶಿಯಲ್ಲೇ ಇರುವುದರಿಂದ ಒತ್ತಡಗಳು ಹೆಚ್ಚು. ವೃತ್ತಿಯಲ್ಲೂ ಒತ್ತಡ ಕೌಟುಂಬಿಕವಾಗೂ ಒತ್ತಡ ಇರುತ್ತದೆ. ಎರಡನ್ನೂ ಸಮರ್ಥವಾಗಿ ನಿಭಾಯಿಸಲು ಹೆಣಗಾಡುವ ಪರಿಸ್ಥಿತಿ. ರಾಹುಬಲ ಇದೆ. ಈ ವರ್ಷದ ಕೊನೆಯ ವರೆಗೂ ಪರವಾಗಿಲ್ಲ. ರಾಹು ಶಕ್ತಿಯನ್ನೂ ಹಣವನ್ನೂ ಕೊಡುತ್ತಾನೆ. ಏ.4ಕ್ಕೆ ವೃಷಭರಾಶಿಗೆ ಶುಕ್ರ ಪ್ರವೇಶವಾದಾಗ ನಿಮಗೆ ಲಾಭ ಇದೆ. ವಾಹನದಿಂದ ಲಾಭ. ವಾಹನ ಖರೀದಿಸುವುದಿದ್ದರೂ ಅಥವಾ ಮಾರಬೇಕಿದ್ದರೂ ಈಗ ಸುಸಮಯ. ಆಸ್ತಿ ಕೊಳ್ಳುವ ಭಾಗ್ಯ ಇದೆ. ಗೃಹಾಲಂಕಾರಕ್ಕಾಗಿ ಖರ್ಚು ಮಾಡುತ್ತೀರಿ. ಅಲಂಕಾರ ವಸ್ತುಗಳನ್ನು ಖರೀದಿ ಮಾಡುತ್ತೀರಿ. ಐದನೇ ಮನೆಯಲ್ಲಿ ಕುಜ ಗಂಡುಮಕ್ಕಳಿಗೆ ಕೊಂಚ ಕಷ್ಟ ಕೊಡುತ್ತಾನೆ. (ಗಂಡು ಸಂತಾನಕ್ಕೆ) ಏ.14ಕ್ಕೆ ಸೂರ್ಯ ಮೇಷರಾಶಿಗೆ ಪ್ರವೇಶವಾದಾಗ ನಿಮಗೆ ಲಾಭ ಇದೆ. ಸರ್ಕಾರಿಂದ ಆಗಬೇಕಾದ ಕೆಲಸಗಳು ಸುಸೂತ್ರವಾಗಿ ಆಗುತ್ತದೆ. ಸರ್ಕಾರದಿಂದ ಹಣ ಸಿಗುತ್ತದೆ. ಕಂಟ್ರಾಕ್ಟರ್ ಗಳಿಗೆ ಸರ್ಕಾರದ ಕಾಂಟ್ರಾಕ್ಟ್ ಸಿಗಬಹುದು. ರಾಜಕೀಯ ವ್ಯಕ್ತಿಗಳಿಗೂ ಲಾಭ ಇದೆ. ಏ.14ರಂದು ಸೂರ್ಯ ಮೇಷರಾಶಿಗೆ ಪ್ರವೇಶವಾದಾಗ ನಿಮ್ಮ ರಾಶಿಯ ಮೂರನೇ ಮನೆಯಲ್ಲಿ ನಾಲ್ಕು ಗ್ರಹಗಳ ಸಂಯೋಗವಾಗುತ್ತದೆ. ಇದು ನಿಮಗೆ ಬಹಳ ದೊಡ್ಡ ಶಕ್ತಿ ಸಾಮರ್ಥ್ಯಗಳನ್ನು ಕೊಡುತ್ತದೆ. ಯಾವುದೇ ದೊಡ್ಡ ಯೋಜನೆಯಲ್ಲಿ ಈ ಸಮಯದಲ್ಲಿ ಪ್ರಾರಂಭಿಸಿ.
ಶುಭವರ್ಣ: ನೀಲಿ ಶುಭಸಂಖ್ಯೆ: 8 ಶುಭರತ್ನ: ನೀಲ/ಪಚ್ಚೆ

ಮೀನ
ಶನಿ 12ನೇ ಮನೆಯಲ್ಲಿ ಇರುವುದು ನಷ್ಟಗಳನ್ನು ಹಣಕಾಸಿನ ಖರ್ಚುಗಳನ್ನೂ ತೋರಿಸುತ್ತದೆ. ವ್ಯಾಪಾರಸ್ಥರಿಗೂ ಈಗ ಹೇಳಿಕೊಳ್ಳುವಂಥ ಲಾಭ ಇಲ್ಲ. ಈ ರಾಶಿಯವರೆಲ್ಲಗೂ ಈಗ ಸಾಡೆಸಾತಿ ಶನಿ ಪ್ರಭಾವ ಇರುವುದರಿಂದ ಅಭಿವೃದ್ಧಿ ಕಡಿಮೆ. ನಿಧಾನ ಪ್ರಗತಿ. ಯಾವ ಕೆಲಸವೂ ನೀವು ಅಂದುಕೊಂಡಂತೆ ನಡೆಯುವುದಿಲ್ಲ. ಅಡೆತಡೆಗಳು ಹೆಚ್ಚು. ಏ.22 ಕ್ಕೆ ಗುರು ಎರಡನೇ ಮನೆಗೆ ಪ್ರವೇಶವಾದಾಗ ನಿಮಗೆ ಗುರುಬಲ ಬರುತ್ತದೆ. ಆಗ ಸಾಡೆಸಾತಿಯ ಪ್ರಭಾವ ಕೊಂಚಮಟ್ಟಿಗೆ ಮರೆಯಾಗುತ್ತದೆ. ಏ.14ರ ನಂತರ ಮೇಷರಾಶಿಯಲ್ಲಿ 4 ಗ್ರಹಗಳು ಸೇರಿ ಒಂದು ರಾಜಯೋಗ ಆಗುತ್ತದೆ. ಇದು ನಿಮಗೆ ಬಹಳ ಯಶಸ್ಸು ಹಾಗೂ ಲಾಭವನ್ನು ಕೊಡುತ್ತದೆ. ಹಣಕಾಸಿನ ಹರಿವು ಉತ್ತಮವಾಗುತ್ತದೆ. ನಾಲ್ಕನೇ ಮನೆಯಲ್ಲಿ ಕುಜ ನಿಮಗೆ ಲಾಭವೇನೂ ಕೊಡುವುದಿಲ್ಲ. ಗುರು ಮೇಷರಾಶಿಯ ಪ್ರವೇಶದಿಂದ ಅವನ ದೃಷ್ಟಿ ಎಂಟನೇ ಮನೆಯಲ್ಲಿ ಇರುವ ಕೇತುವಿನ ಮೇಲೆ ಬೀಳುವುದರಿಂದ ಕೇತುವಿನ ಕೆಟ್ಟಪರಿಣಾಮಗಳಿಗೆ ಕೊಂಚ ಬ್ರೇಕ್ ಹಾಕಿದಂತೆ ಆಗುತ್ತದೆ. ತೀವ್ರತೆ ಕಳೆದುಕೊಂಡು ನಿಮಗೆ ಕೊಂಚ ನಿರಾಳವಾಗುತ್ತದೆ. ಕುಟುಂಬದಲ್ಲಿ ಮನಸ್ತಾಪಗಳು ಕೊಂಚ ಹದ್ದುಬಸ್ತಿಗೆ ಬಂದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನೀವು ಹನುಮಾನ್ ಚಾಲೀಸಾ ಓದಬೇಕು. ಕಪ್ಪುಹಸುವಿಗೆ ಆಹಾರ ಕೊಡಬೇಕು.
ಶುಭವರ್ಣ: ಹಳದಿ ಶುಭಸಂಖ್ಯೆ: 2 ಶುಭರತ್ನ: ಕನಕ ಪುಷ್ಯರಾಗ