‘ಲಾಲ್ ಸಿಂಗ್ ಚಡ್ಡಾ’ ಸೋಲಿನ ನಂತರ ಆಮೀರ್ ಖಾನ್ ಎಷ್ಟೋ ನಿದ್ರೆಯಿಲ್ಲದ ದಿನಗಳನ್ನು ಕಳೆದಿದ್ದಾರಂತೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ. ಬಾಲಿವುಡ್ ಚಿತ್ರರಂಗದಲ್ಲಿ ಇದು ಮತ್ತೊಂದು ಇತಿಹಾಸ ನಿರ್ಮಿಸುತ್ತದೆ ಎಂದು ಆಮೀರ್ ಖಾನ್ ಬಲವಾಗಿ ನಂಬಿದ್ದರಂತೆ. ಆದರೆ ಜನರು ಸಿನಿಮಾವನ್ನು ನಿರಾಕರಿಸಿದ್ದಾರೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಕೂಡಾ ದೊರೆತಿಲ್ಲ, ಬಾಕ್ಸ್ ಆಫೀಸಿನಲ್ಲಿ ಕೂಡಾ ಸಿನಿಮಾ ಸ್ವಲ್ಪವೂ ಲಾಭ ಮಾಡಿಲ್ಲದಿರುವುದು ಆಮೀರ್‌ಗೆ ಬೇಸರ ತರಿಸಿದೆಯಂತೆ. ಈ ಕಾರಣಕ್ಕಾಗಿ ಆಮೀರ್ ಖಾನ್ ಕೆಲವು ದಿನಗಳ ಕಾಲ ಯಾವ ಸಿನಿಮಾವನ್ನೂ ಒಪ್ಪಿಕೊಳ್ಳಲು ನಿರ್ಧಾರ ಮಾಡಿದ್ದಾರಂತೆ. ಆದರೆ ಆಮೀರ್ ಖಾನ್ ಶಾಶ್ವತವಾಗಿ ಸಿನಿಮಾರಂಗದಿಂದ ದೂರ ಉಳಿಯಲಿದ್ದಾರೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಆದರೆ ಆಮೀರ್ ಖಾನ್ ಅಧಿಕೃತವಾಗಿ ಇದನ್ನು ಘೋಷಿಸಿಲ್ಲ. ಇವೆಲ್ಲಾ ಅಂತೆ ಕಂತೆ ಮಾತುಗಳಿಂದ ಆಮೀರ್ ಖಾನ್ ಅಭಿಮಾನಿಗಳಿಗೆ ಬೇಸರ ಆಗಿರುವುದಂತೂ ನಿಜ.