ಸ್ಯಾಂಡಲ್ ವುಡ್ ನಲ್ಲಿ ಈಗ ಮದುವೆ ಸೀಸನ್ ಆರಂಭವಾಗಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಇತ್ತೀಚೆಗೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಉದ್ಯಮಿ ಯಶಸ್ವಿ ಪಟ್ಲ ಜೊತೆ ನಟಿ ಅದಿತಿ ಪ್ರಭುದೇವ ಹಸೆಮಣೆ ಏರಿದರು. ಸ್ಯಾಂಡಲ್ ವುಡ್ ನಲ್ಲಿ ಈಗ ಮದುವೆ ಸೀಸನ್ ಆರಂಭವಾಗಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಇತ್ತೀಚೆಗೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಉದ್ಯಮಿ ಯಶಸ್ವಿ ಪಟ್ಲ ಜೊತೆ ನಟಿ ಅದಿತಿ ಪ್ರಭುದೇವ ಹಸೆಮಣೆ ಏರಿದರು.
ನಂತರ ಹಿರಿಯ ನಟ, ರಾಜಕಾರಣಿ ದಿವಂಗತ ಅಂಬರೀಷ್, ಸಂಸದೆ ಸುಮಲತಾ ಪುತ್ರ ನಟ ಅಭಿಷೇಕ್ ಮದುವೆ ಸಿದ್ದತೆಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಮಾಡೆಲ್ ಅವಿವಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.
ಇತ್ತೀಚೆಗೆ ಮೂಗುತಿ ಚುಚ್ಚಿಸಿಕೊಂಡ ನಟಿ ಹರಿಪ್ರಿಯಾ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಾಗ ಅವರ ಮದುವೆ ಸುದ್ದಿ ಗುಸುಗುಸು ಕೇಳಿಬಂತು. ವಿಡಿಯೊದಲ್ಲಿ ನಟ ವಸಿಷ್ಠ ಸಿಂಹ ಇದ್ದರು, ಅವರು ಹರಿಪ್ರಿಯಾಗೆ ಮೂಗು ಚುಚ್ಚಿದಾಗ ನೋವಾದಾಗ ಸಮಾಧಾನ ಮಾಡಿದರು ಎಂದು ಹೇಳಲಾಗುತ್ತಿತ್ತು. ಈ ವದಂತಿಗಳ ಮಧ್ಯೆ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಇಬ್ಬರೂ ಕೈಕೈ ಹಿಡಿದು ನಡೆದುಕೊಂಡು ಹೋಗಿದ್ದು ಕ್ಯಾಮರಾ ಕಣ್ಣಿಗೆ ಬಿದ್ದರು. ಸ್ಯಾಂಡಲ್ ವುಡ್ ನ ಈ ಜೋಡಿ ದುಬೈಗೆ ರಜೆ ಕಳೆಯಲೆಂದು ಹೋಗಿದ್ದಾರೆ ಎಂದು ಹೇಳಲಾಗುತ್ತಿತ್ತು.
ಆದರೆ ಈಗ ಕೇಳಿಬರುತ್ತಿರುವ ಮತ್ತೊಂದು ಸುದ್ದಿಯೆಂದರೆ, ದುಬೈಯಲ್ಲಿ ಈ ತಾರಾ ಜೋಡಿ ಸದ್ಯದಲ್ಲಿಯೇ ಹಸೆಮಣೆಗೆ ಏರಲಿದ್ದಾರೆ ಎಂಬುದು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ಬರಲು ದುಬೈಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಈಗಷ್ಟೇ ಇವರಿಬ್ಬರೂ ದುಬೈ ಪ್ರವಾಸ ಮುಗಿಸಿಕೊಂಡು ಬಂದಿದ್ದು ಇಷ್ಟೆಲ್ಲಾ ರೂಮರ್ ಗಳು ಕೇಳಿಬರುತ್ತಿದ್ದರೂ ಗುಟ್ಟುಬಿಟ್ಟುಕೊಟ್ಟಿಲ್ಲ.
By the way, city is filled with the buzz of actors Vasishta Simha and Hariprriya, who are rumoured to soon tie the knot at a ceremony in Dubai@sharadasrinidhi @Cloudnirad @NewIndianXpress @tniefeatures pic.twitter.com/iMj5fTdOb5
— TNIE Karnataka (@XpressBengaluru) December 1, 2022
ಇತ್ತೀಚೆಗೆ ಇಬ್ಬರೂ ಹುಟ್ಟುಹಬ್ಬ ಶುಭಾಶಯಗಳನ್ನು ಪರಸ್ಪರ ತಿಳಿಸುವ ಸಂದರ್ಭದಲ್ಲಿ ಪಾರ್ಟ್ನರ್ ಎಂದು ಸಂಬೋಧಿಸಿದ್ದಾರೆ.
Romance is in the air @ImSimhaa and @HariPrriya6 are the new love birds in #Sandalwood town. pic.twitter.com/KHYxECKk19
— A Sharadhaa (@sharadasrinidhi) November 29, 2022
<img src="https://media.kannadaprabha.com/uploads/user/imagelibrary/2022/12/1/w600X390/va.jpg" alt="ವಸಿಷ್ಠ ಸಿಂಹ-ಹರಿಪ್ರಿಯಾ ದುಬೈಯಲ್ಲಿ ಸದ್ಯದಲ್ಲೇ ಹಸೆಮಣೆಗೆ?: ಸ್ಯಾಂಡಲ್ ವುಡ್ ನಲ್ಲಿ ದಟ್ಟವಾಗಿದೆ ವದಂತಿ" title="ವಸಿಷ್ಠ ಸಿಂಹ-ಹರಿಪ್ರಿಯಾ ದುಬೈಯಲ್ಲಿ ಸದ್ಯದಲ್ಲೇ ಹಸೆಮಣೆಗೆ?: ಸ್ಯಾಂಡಲ್ ವುಡ್ ನಲ್ಲಿ ದಟ್ಟವಾಗಿದೆ ವದಂತಿ"