Astrology
oi-Sunitha B

ಈ ಜಗತ್ತಿನಲ್ಲಿ ಎಲ್ಲಾ ರೀತಿಯ ಜನರಿದ್ದಾರೆ. ಸತ್ಯ ಹೇಳುವವರು, ಸುಳ್ಳನ್ನೇ ಹೇಳಿಕೊಂಡು ಜೀವನ ಮಾಡುವವರು, ಜಗಳ ತಂದೊಡ್ಡುವವರು, ಸಂದರ್ಭಕ್ಕೆ ತಕ್ಕಂತೆ ಮಾತನಾಡುವವರು ಹೀಗೆ ಹೇಳ್ತಾ ಹೋದರೆ ಈ ಪಟ್ಟಿ ಹನುಮಂತನ ಬಾಲದಂತೆ ಉದ್ದವಾಗುತ್ತದೆ.
ನಾವು ಪ್ರತಿದಿನ ಎಲ್ಲಾ ರೀತಿಯ ಜನರ ನಡುವೆ ಇರಬೇಕಾಗುತ್ತದೆ. ಮನೆಯಲ್ಲಾಗಲಿ, ಕಚೇರಿಯಲ್ಲಾಗಲಿ ಅಥವಾ ಸಂಬಂಧಿಕರಲ್ಲಾಗಲಿ ಇಂತವರು ಇದ್ದೇ ಇರುತ್ತಾರೆ. ಕೆಲವರು ಮೌನವಾಗಿರುತ್ತಾರೆ, ಕೆಲವರು ಸರಿಯಾದ ಸಮಯಕ್ಕಾಗಿ ಮಾತನಾಡಲು ಕಾಯುತ್ತಾರೆ, ಇನ್ನೂ ಅನೇಕರು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಇವರೆಲ್ಲರ ನಡುವೆ ವದಂತಿಯನ್ನು ಇಷ್ಟಪಡುವ ಜನರು ಒಂದು ವಿಧವಾಗಿದೆ.

ನಮ್ಮ ನಡುವೆ ವದಂತಿ (ಗಾಸಿಪ್) ಹರಡಲು ಇಷ್ಟಪಡುವ ಜನರೂ ಇದ್ದಾರೆ. ಹೀಗಾಗಿ ವದಂತಿಗಳನ್ನು ಹರಡುವ ಜನರೊಂದಿಗೆ ನೀವು ಜಾಗರೂಕರಾಗಿರಬೇಕು. ಜ್ಯೋತಿಷ್ಯದ ಮೂಲಕ ಈ ಜನರನ್ನು ಗುರುತಿಸಬಹುದು. ರಾಶಿಚಕ್ರದ ಚಿಹ್ನೆಗಳ ಆಧಾರದ ಮೇಲೆ ಈ ಲೇಖನದಲ್ಲಿ ಯಾವ ರಾಶಿಚಕ್ರದವರು ಗಾಸಿಪ್ ಹರಡುವುದರಲ್ಲಿ ನಿಪುಣರು ಎಂದು ತಿಳಿಯಿರಿ.

ಮಿಥುನ ರಾಶಿ
ಮಿಥುನ ರಾಶಿಯವರು ತಮ್ಮ ಸಂವಹನ ಮತ್ತು ಸಾಮಾಜಿಕ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು ಸ್ವಾಭಾವಿಕವಾಗಿ ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲವನ್ನು ಹೊಂದಿರುತ್ತಾರೆ. ಇತರರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಬಯಸುತ್ತಾರೆ. ಇದು ಕೆಲವೊಮ್ಮೆ ಅವರನ್ನು ಗಾಸಿಪ್ನಲ್ಲಿ ತೊಡಗುವಂತೆ ಮಾಡುತ್ತದೆ. ಮಿಥುನ ರಾಶಿಯವರು ಸಂಗ್ರಹಿಸಿದ ಮಾಹಿತಿಯನ್ನು ಇತರರೊಂದಿಗೆ ಕಥೆಗಳ ರೂಪದಲ್ಲಿ ವಿವರಿಸುತ್ತಾರೆ. ಕೆಲ ವಿಚಾರಗಳು ಅದರಲ್ಲಿ ಇಲ್ಲದಿದ್ದರು ಇದ್ದಂತೆ ಹಂಚಿಕೊಳ್ಳಲು ಆನಂದಿಸುತ್ತಾರೆ.

ಸಿಂಹ ರಾಶಿ
ಸಿಂಹ ರಾಶಿಯವರು ಆತ್ಮವಿಶ್ವಾಸದ ವ್ಯಕ್ತಿಗಳು. ಇವರು ಇತರರ ಗಮನ ಆಕರ್ಷಿಸಲು ಬಯಸುತ್ತಾರೆ. ಈ ರಾಶಿಯವರು ಇತರರಿಗಿಂತ ಮೊದಲು ಗುರುತಿಸಿಕೊಳ್ಳಲು ಮತ್ತು ಮೆಚ್ಚುಗೆ ಪಡೆಯುವ ಬಯಕೆಯನ್ನು ಹೊಂದಿರುತ್ತಾರೆ. ಅವರು ನೇರವಾಗಿ ಗಾಸಿಪ್ನಲ್ಲಿ ತೊಡಗದಿದ್ದರೂ, ಗಾಸಿಪ್ ಹರಡುವವರೊಂದಿಗೆ ಹೆಚ್ಚಿನ ಸ್ನೇಹವನ್ನು ಹೊಂದಿರುತ್ತಾರೆ. ಹರಟೆ ಹೊಡೆಯುವ ಸ್ನೇಹಿತರ ವಲಯವನ್ನು ಸಿಂಹ ರಾಶಿಯವರು ಇಷ್ಟಪಡುತ್ತಾರೆ.

ತುಲಾ ರಾಶಿ
ತುಲಾ ರಾಶಿಯವರು ರಾಜತಾಂತ್ರಿಕತೆಯಿಂದ ಆಕರ್ಷಕ ಜನರು. ಅವರು ತಮ್ಮ ಜೀವನದಲ್ಲಿ ಸಾಮರಸ್ಯವನ್ನು ಗೌರವಿಸುತ್ತಾರೆ.ತುಲಾ ರಾಶಿಯವರು ಇತರರೊಂದಿಗೆ ಸ್ನೇಹ ಮತ್ತು ದಯೆಯಿಂದ ವರ್ತಿಸಲು ಮತ್ತು ಸಂಘರ್ಷವನ್ನು ತಪ್ಪಿಸುವ ಬಯಕೆಯನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಮೈತ್ರಿ ಮಾಡುವ ವಿಚಾರದಲ್ಲಿ ಅಥವಾ ಇತರರ ಬಗ್ಗೆ ಮಾಹಿತಿಯನ್ನು ಪಡೆಯುವ ವಿಚಾರದಲ್ಲಿ ವದಂತಿ ಹರಡಲು ಹಿಂಜರಿಯುವುದಿಲ್ಲ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಸ್ವಾಭಾವಿಕವಾಗಿ ತೀವ್ರ ಭಾವೋದ್ರಿಕ್ತ ಜನರು. ಇವರು ಸಾಮಾನ್ಯವಾಗಿ ರಹಸ್ಯಗಳಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಮತ್ತು ಈ ಕುತೂಹಲವು ಇತರರ ವೈಯಕ್ತಿಕ ಜೀವನವನ್ನು ತಿಳಿದುಕೊಳ್ಳಲು ಬಯಸುತ್ತದೆ. ಹೀಗಾಗಿ, ಈ ರಾಶಿಚಕ್ರ ಚಿಹ್ನೆಯವರು ತಮ್ಮ ಜ್ಞಾನ ಎಂಥದ್ದು ಎಂದು ಸಾಬೀತುಪಡಿಸಲು ಮತ್ತು ಇತರರೊಂದಿಗೆ ನಿಯಂತ್ರಣ ಕಾಯ್ದುಕೊಳ್ಳಲು ವದಂತಿಗಳನ್ನು ಹರಡಲು ತೊಡಗಬಹುದು.

ಮೀನ ರಾಶಿ
ಮೀನ ರಾಶಿಯವರು ಇತರರ ಭಾವನೆಗಳೊಂದಿಗೆ ಆಳವಾಗಿ ಸಂಪರ್ಕಿಸುವ ಸೂಕ್ಷ್ಮ ವ್ಯಕ್ತಿಗಳು. ಇವರು ಗಾಸಿಪ್ನಲ್ಲಿ ಸಕ್ರಿಯವಾಗಿ ಭಾಗವಹಿಸದಿದ್ದರೂ, ಅವರ ಸಹಾನುಭೂತಿಯ ಸ್ವಭಾವ ಕೆಲವೊಮ್ಮೆ ಇತರರು ಹಂಚಿಕೊಳ್ಳುವ ಗಾಸಿಪ್ಗಳನ್ನು ಸ್ವೀಕರಿಸಲು ಕಾರಣವಾಗುತ್ತದೆ. ಗಾಸಿಪ್ ಮಾಡುವುದನ್ನು ಅಥವಾ ಇತರ ಜನರ ಜೀವನದ ಬಗ್ಗೆ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಈ ರಾಶಿಯವರು ಪ್ರೀತಿಸುತ್ತಾರೆ.

ಇತರ ರಾಶಿಚಕ್ರ ಚಿಹ್ನೆಗಳು
ಮೇಷ, ವೃಷಭ, ಕರ್ಕ, ಕನ್ಯಾ, ಧನು ಮತ್ತು ಕುಂಭ ರಾಶಿಯವರು ಕೆಲವೊಮ್ಮೆ ಗಾಸಿಪ್ ಮಾಡಬಹುದು. ಆದರೆ, ಅವರು ಯಾವಾಗಲೂ ಇದು ಒಂದೇ ಕೆಲಸವನ್ನು ಮಾಡುವುದಿಲ್ಲ. ಹರಟೆ ಹೊಡೆಯುವುದರಲ್ಲಿ ಈ ರಾಶಿಯವರಿಗೆ ಆಸಕ್ತಿಯಿಲ್ಲ. ಆದಾಗ್ಯೂ, ಈ ಯಾವುದೇ ರಾಶಿಚಕ್ರ ಚಿಹ್ನೆಗಳನ್ನು ಕಡಿಮೆ ಅಂದಾಜು ಮಾಡಬೇಡಿ.
English summary
We have people who love to gossip. These 5 signs are experts in spreading rumours. Learn about this zodiac sign.