ANI
ಕೊಲ್ಕತ್ತಾ: ನೇರ ನಡೆ, ನುಡಿ, ನಿಷ್ಠುರ ನಡವಳಿಕೆಯಿಂದ ದೇಶಾದ್ಯಂತ ಹೆಸರುವಾಸಿಯಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೆಲವೊಂದು ವಿಶಿಷ್ಠ ಕಾರಣಗಳಿಂದಲೂ ಆಗಾಗ್ಗೆ ಸುದ್ದಿಯಾಗುತ್ತಾರೆ.
ಇಂದು ಕೂಡಾ ಆದೇ ರೀತಿಯಲ್ಲಿ ಜನರಿಗೆ ಪಕೋಡಾ ಹಂಚುವ ಮೂಲಕ ಪರೋಕ್ಷವಾಗಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.
ಹೌದು. ಜಾರ್ಗ್ರಾಮ್ ನ ರಸ್ತೆ ಬದಿಯ ಟೀ ಸ್ಟಾಲ್ ವೊಂದರ ಬಳಿ ಬೆಂಗಾವಲು ಪಡೆಯನ್ನು ತಡೆದ ಮಮತಾ ಬ್ಯಾನರ್ಜಿ, ಅಲ್ಲಿದ್ದ ಜನರಿಗೆ ಪಕೋಡಾ ಹಂಚಲು ಆರಂಭಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
#WATCH | West Bengal CM Mamata Banerjee stopped her convoy at a roadside tea stall and started serving pakoda to the people, in Jhargram. pic.twitter.com/2b3NKhXj5q
— ANI (@ANI) November 15, 2022