The New Indian Express
ಬೆಂಗಳೂರು: ಕೆಜಿಎಫ್ ಭರ್ಜರಿ ಯಶಸ್ಸಿನ ಬಳಿಕ ಮುಂದಿನ ಯೋಜನೆಯಲ್ಲಿ ತಲ್ಲೀನರಾಗಿರುವ ರಾಕಿಂಗ್ ಸ್ಟಾರ್ ಯಶ್ ಇದೀಗ ನಟನೆಯೊಂದಿಗೆ ನಿರ್ಮಾಣಕ್ಕೂ ಧುಮುಕಲಿದ್ದಾರೆ ಎನ್ನಲಾಗಿದೆ.
ಹೌದು.. ಕೆಜಿಎಫ್ 2 ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ ಇದೀಗ ನಟನೆಯೊಂದಿಗೆ ಚಿತ್ರ ನಿರ್ಮಾಣಕ್ಕೂ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ನಟನೆಯ ಮುಂದಿನ ಚಿತ್ರಕ್ಕೆ ಯಶ್ ಅವರೇ ಬಂಡವಾಳ ಹೂಡುತ್ತಿದ್ದು, ಇದಕ್ಕಾಗಿ ತಮ್ಮ ಮಗಳಾದ ಐರಾ ಅವರ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ತೆರೆಯಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಜನರನ್ನು ಭಯಪಡಿಸಲು ಕೆಜಿಎಫ್ ಮಾಡಿಲ್ಲ, ಸ್ಫೂರ್ತಿ ತುಂಬಲು ಮಾಡಿದ್ದೇವೆ: ನಟ ಯಶ್
ಐರಾ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ನಿರ್ಮಾಣ ಆಗಲಿದ್ದು, ಯಶ್ ಆ ಸಂಸ್ಥೆಯ ಬ್ಯಾನರ್‌ನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕೆಜಿಎಫ್ ಸಿನಿಮಾ ಸಕ್ಸೆಸ್ ಆದ ಬಳಿಕ ಯಶ್ ಅವರು ಯಾವ ಸಿನಿಮಾ ಮಾಡಬಹುದು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಮೊದಲು ನರ್ತನ್ ಜತೆ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಸದ್ಯ ಆ ಸಿನಿಮಾ ಆಗುವುದಿಲ್ಲ ಎನ್ನುವ ಸುದ್ದಿ ಹರಡಿದೆ. ನರ್ತನ್ ಕೂಡ ಮತ್ತೊಂದು ಸಿನಿಮಾ ತಯಾರಿಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ಎಂಟು ತಿಂಗಳುಗಳು ಕಳೆದಿವೆ, ನಟ ಯಶ್ ಇನ್ನೂ ಅಧಿಕೃತವಾಗಿ ತಮ್ಮ ಮುಂದಿನ ಚಿತ್ರ ಖಚಿತಪಡಿಸಿಲ್ಲ.
There is always a way to reach the target, the challenge is to spot it!!
Thank you my man JJ Perry, what a fantastic day!!
Next time it’s gotta be Kalashnikov !! pic.twitter.com/MYDOQohyvT— Yash (@TheNameIsYash) September 29, 2022
ಇದೀಗ ಯಶ್ ಸಿನಿಮಾಗೆ ಅವರ ಮಗಳೇ ನಿರ್ಮಾಪಕಿಯಾಗುತ್ತಿದ್ದು, ಸಂಸ್ಥೆಗೆ ಬೇಕಿರುವ ಕೆಲಸಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಯಶ್ ತಮ್ಮ ಮುಂದಿನ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್‌ನಲ್ಲಿ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿಯ ಬೆನ್ನಲ್ಲೇ ಕೆಜಿಎಫ್ 3 ಸಿನಿಮಾ ವಿಷಯ ಹೊರ ಬಂದಿತ್ತು. ಇದಕ್ಕೆ ಇಂಬು ನೀಡುವಂತೆ ಈ ಹಿಂದೆ ನಟ ಯಶ್ ಹಾಲಿವುಡ್ ಸಾಹಸ ನಿರ್ದೇಶಕ ಮತ್ತು ಸ್ಟಂಟ್‌ಮ್ಯಾನ್ ಜೆಜೆ ಪೆರ್ರಿ ಅವರೊಂದಿಗೆ ಶೂಟಿಂಗ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದರು. ಇದು ಯಶ್ ಕೆಜಿಎಫ್ 3ಗೆ ಸಿದ್ಧರಾಗುತ್ತಿದ್ದಾರೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಪ್ರಕಾಶ್ ರೈ ಕನಸಿನ ‘ಅಪ್ಪು ಆಂಬ್ಯುಲೆನ್ಸ್ ‘ಸೇವೆಗೆ ರಾಕಿಂಗ್ ಸ್ಟಾರ್ ಯಶ್ ಸಾಥ್
ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಕೆಜಿಎಫ್ ನಿರ್ಮಾಪಕರು ಮತ್ತು ಯಶ್ ಅವರು ಪ್ರಸ್ತುತ ಕೆಜಿಎಫ್ ಚಾಪ್ಟರ್ 3 ಮಾಡುವ ಯೋಜನೆ ಹೊಂದಿಲ್ಲ ಎಂದು ಹೇಳಿದ್ದಾರೆ.