Online Desk
ನಟ ಧನಂಜಯ್ ನಟನೆಯ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾ ಡಿಸೆಂಬರ್ 30 ರಂದು ತೆರೆಗೆ ಬರಲಿದ್ದು, ಮಂಗಳವಾರ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಈ ವರ್ಷದಲ್ಲಿ ನಟ ರಾಕ್ಷಸ ಧನಂಜಯ್ ನಟನೆಯ ಕೊನೆಯ ಚಿತ್ರ ಇದಾಗಲಿದೆ.
ಚಿತ್ರವು ಕೌಟುಂಬಿಕ ಮತ್ತು ಸ್ನೇಹದ ಅಂಶಗಳೊಂದಿಗೆ ರೋಮ್ಯಾಂಟಿಕ್ ಥ್ರಿಲ್ಲರ್ ಆಗಿದ್ದು, ಮಾನವೀಯತೆಯ ಮಹತ್ವವನ್ನು ಒತ್ತಿಹೇಳುವುದನ್ನು ನಾವು ಟೀಸರ್‌ನಲ್ಲಿ ನೋಡಬಹುದು.
ಕುಶಾಲ್ ಗೌಡ ಅವರ ನಿರ್ದೇಶನವು ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದು, ಯಶ್ ಶೆಟ್ಟಿ, ಅದಿತಿ ಪ್ರಭುದೇವ, ಭಾವನಾ, ಬೇಬಿ ಪ್ರಣ್ಯ ಮತ್ತು ಪ್ರಕಾಶ್ ಬೆಳವಾಡಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಧನಂಜಯ ನಟನೆಯ ಜಮಾಲಿ ಗುಡ್ಡ ಸಿನಿಮಾ ರಿಲೀಸ್ ಡೇಟ್ ಫಿಕ್ಸ್!
ನಿಹಾರಿಕಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಶ್ರೀಹರಿ ರೆಡ್ಡಿ ಅವರ ನಿರ್ಮಾಣದಲ್ಲಿ ಸಿನಿಮಾಗೆ ಅನೂಪ್ ಸೀಳಿನ್ ಅವರು ಹಿನ್ನೆಲೆ ಸಂಗೀತ ನೀಡಿದ್ದರೆ, ಅರ್ಜುನ್ ಜನ್ಯ ಅವರ ಹಾಡುಗಳನ್ನು ಸಂಯೋಜಿಸಿದ್ದಾರೆ.