The New Indian Express
ಬೆಂಗಳೂರು: ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಶಾಲಾ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಚಂದ್ರಾ ಲೇಔಟ್ ನಲ್ಲಿ ಮಂಗಳವಾರ ತಡ ರಾತ್ರಿ ಈ ಘಟನೆ ನಡೆದಿತ್ತು. ತಮ್ಮ ಮೇಲೆ ನಡೆದ ವಿಕೃತಿಯ ಬಗ್ಗೆ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಹಿಳೆ ನಾಯಂಡಹಳ್ಳಿ ಜಂಕ್ಷನ್ ಬಳಿ ಬಸ್ ಗಾಗಿ ನಾಯುತ್ತಿದ್ದಾಗ ಶಾಲಾ ಬಸ್ ಚಾಲಕ ಬಸ್ ನಿಲ್ಲಿಸಿದ, ಮಹಿಳೆ ಬಸ್ ಹತ್ತಿದಾಗ ಬಸ್ ಖಾಲಿ ಇತ್ತು. ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡ ಚಾಲಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಬಸ್ ನ್ನು ತೆಗೆದುಕೊಂಡು ಹೋಗಿ ಚಾಲಕ ಶಿವಕುಮಾರ್ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ನಡೆದ ಘಟನೆಯನ್ನು ಮಹಿಳೆ ಮಗನಿಗೆ ಹೇಳಿದ್ದು, ಬಸ್ ನ ಫೋಟೋವನ್ನೂ ಕ್ಲಿಕ್ಕಿಸಿಕೊಂಡಿದ್ದಾರೆ. ಆರೋಪಿಯನ್ನು ಮಹಿಳೆಯ ಪುತ್ರ ಪತ್ತೆ ಮಾಡಿದ್ದು ಜಗಳಕ್ಕೆ ಇಳಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಚಾಲಕನನ್ನು ಬಂಧಿಸಿದ್ದಾರೆ.