Astrology
oi-Mayuri N

ಕರ್ನಾಟಕ ವಿಧಾನಸಭೆಗೆ ಚುನಾವಣೆಗೆ ಮುಗಿದಿದೆ, ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಒಂದೋ ಸಮ್ಮಿಶ್ರ ಸರಕಾರ ಅಥವಾ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಸ್ವಾಭಾವಿಕವಾಗಿ ಇದನ್ನೆಲ್ಲಾ ನಾವು ನಂಬುವುದಿಲ್ಲ, ನಮ್ಮದೇ ಸರಕಾರ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರಿಗೆ ಮುಂದಿನ ಗದ್ದುಗೆ, ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದರ ಬಗ್ಗೆ ಹಲವರು ಜಾತಕಫಲದ ಮೂಲಕ ಹೇಳಿದ್ದಾರೆ. ಉತ್ತರ ಭಾರತ ಮೂಲದ ಖ್ಯಾತ ಜ್ಯೋತಿಷಿ ಕೆ.ಎಂ.ಸಿನ್ಹಾ ಅವರು ಕರ್ನಾಟಕ ಚುನಾವಣೆಯ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಹಿಂದೆ ಏನು ಹೇಳಿದ್ದರೋ ಅದನ್ನೇ ಪುನರಾವರ್ತಿಸಿದ್ದಾರೆ.

ಕರ್ನಾಟಕ ಚುನಾವಣೆಯ ಬಗ್ಗೆ ಭವಿಷ್ಯ ನುಡಿದಿರುವ ಜ್ಯೋತಿಷಿ ಕೆಎಂ ಸಿನ್ಹಾ ತಾನು ಎರಡು ರೀತಿಯಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷ ಆಡಳಿತವನ್ನು ಪಡೆಯಲಿದೆ ಎಂಬುವುದನ್ನು ಪರಿಶೀಲಿಸಿ ತಾನು ಈ ಭವಿಷ್ಯವನ್ನು ನುಡಿದಿರುವುದಾಗಿ ತಿಳಿಸಿದ್ದಾರೆ. ತಾನು ಸಂಖ್ಯಾಶಾಸ್ತ್ರದ ಪ್ರಕಾರವಾಗಿಯೂ ಕರ್ನಾಟಕದ ಮುಂದಿನ ಸಿಎಂ ಗದ್ದುಗೆಯನ್ನು ಯಾವ ಪಕ್ಷವನ್ನು ಪಡೆಯಲಿದೆ ಎಂದು ಅಂದಾಜು ಮಾಡಿದ್ದೇನೆ ಎಂದಿದ್ದಾರೆ.
Visha Yoga 2023: ವಿಷ ಯೋಗ ದಿನದಂದೇ ರಾಜ್ಯ ಚುನಾವಣಾ ಫಲಿತಾಂಶ: 3 ರಾಶಿಯವರ ಖಾತೆಗಳಿಂದ ಹಣ ಕಣ್ಮರೆ
ಯಾವ ಪಕ್ಷ ಅಧಿಕಾರ ಸ್ವೀಕಾರ ಮಾಡಲಿದೆ?
ಕುಂಡಲಿಯ ಆಧಾರದಲ್ಲಿ ನಾವು ನೋಡುವಾಗ ಎಲ್ಲ ಪಕ್ಷಗಳ ಕುಂಡಲಿಯನ್ನು ಅಧ್ಯಯನ ಮಾಡಬೇಕಾಗುತ್ತದೆ. ಮೇ 13ರಂದು ಗ್ರಹಗಳ ಸಂಚಾರದ ಆಧಾರದಲ್ಲಿ ತಾನು ಈ ಭವಿಷ್ಯವನ್ನು ಹೇಳುತ್ತಿರುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಜ್ಯೋತಿಷಿ ಕೆಎಂ ಸಿನ್ಹಾ ಪ್ರಕಾರ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರವನ್ನು ಸ್ವೀಕಾರ ಮಾಡಲಿದೆ.
ಜ್ಯೋತಿಷಿ ಕೆಎಂ ಸಿನ್ಹಾ ಪ್ರಕಾರ ಮುಂದಿನ ಸಿಎಂ ಯಾರು?
ಹಾಗೆಯೇ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಪ್ರಬಲ ಪಕ್ಷವಾಗಲಿದೆ. ಅಧಿಕಾರವನ್ನು ಸ್ವೀಕಾರ ಮಾಡಲಿದೆ. ಈ ಪಕ್ಷಕ್ಕೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಹೇಳಿರುವ ಜ್ಯೋತಿಷಿ ಕೆಎಂ ಸಿನ್ಹಾ ಸಿದ್ಧರಾಮಯ್ಯರೇ ಸಿಎಂ ಆಗಲಿದ್ದಾರೆ ಎಂದು ಹೇಳಿದ್ದಾರೆ. ಮೇ 17-18ರಂದು ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
“ನಾನು ಬಿಜೆಪಿ ಬೆಂಬಲಿತ ವ್ಯಕ್ತಿ ಎಂದು ಹಲವಾರು ಬಾರಿ ಹೇಳುತ್ತಾರೆ. ಹಾಗೆಯೇ ಬಿಜೆಪಿಯಿಂದ ನನಗೆ ಹಣ ಸಿಗುತ್ತೆ, ಅದಕ್ಕೆ ಬಿಜೆಪಿ ಪರವಾಗಿ ಭವಿಷ್ಯವನ್ನು ಹೇಳುತ್ತೇನೆ ಎಂದು ಕೂಡಾ ಹಲವಾರು ಮಂದಿ ಕಾಮೆಂಟ್ ಮಾಡುತ್ತಾರೆ. ಆದರೆ ಸತ್ಯವನ್ನು ಎಂದಿಗೂ ಕೂಡಾ ಅಲ್ಲಗಳೆಯಲಾಗದು. ನಿಜವಾದ ಜ್ಯೋತಿಷಿ ಎಂದಿಗೂ ಕೂಡಾ ಸತ್ಯ ವಿಷಯವನ್ನು ಸ್ಪಷ್ಟವಾಗಿ ಹೇಳುತ್ತಾರೆ. ಆದ್ದರಿಂದಾಗಿ ನಾನು ಕರ್ನಾಟಕದಲ್ಲಿ ಕಾಂಗ್ರೆಸ್ ಬರುತ್ತದೆ ಎಂದು ಹೇಳುತ್ತೇನೆ,” ಎಂದಿದ್ದಾರೆ.
ಕಾಂಗ್ರೆಸ್ ಕರ್ನಾಟಕದಲ್ಲಿ ಬಜರಂಗದಳವನ್ನು ಬ್ಯಾನ್ ಮಾಡುವುದಾಗಿ ಹೇಳಿದ ಬಳಿಕ ಮತ್ತು ಸೀಟುಗಳ ಬದಲಾವಣೆಯ ಕಾರಣದಿಂದಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವ ಕ್ಷೇತ್ರಗಳ ಲೆಕ್ಕಾಚಾರದಲ್ಲಿ ಕೊಂಚ ಏರಿಳಿತ ಕಾಣಬಹುದು ಎಂದು ನಾನು ಹೇಳಿದ್ದೆ. ಆದರೂ ಕೂಡಾ ಕಾಂಗ್ರೆಸ್ ಪೂರ್ಣ ಬಹುಮತದ ಸರ್ಕಾರ ಆಗುವ ಸಾಧ್ಯತೆ ಕಾಣುತ್ತಿಲ್ಲ. ಆದರೆ ಸಿದ್ಧರಾಮಯ್ಯರೇ ಸಿಎಂ ಆಗುತ್ತಾರೆ.
English summary
Karnataka Election Results 2023: Explore which party will come into power in Karnataka according to KM Sihna Swamiji’s astrology prediction.