The New Indian Express
ಬೀಜಿಂಗ್: ಚೀನಾ ಶೂನ್ಯ ಕೋವಿಡ್-19 ನಿಲುವನ್ನು ಘೋಷಿಸಿದ್ದು, ಕಠಿಣವಾಗಿ ಈ ನಿಲುವನ್ನು ಪಾಲಿಸುವುದಾಗಿ ಹೇಳಿದೆ. ಈ ನಡುವೆ ಚೀನಾದಲ್ಲಿ ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.
ಚೀನಾದಲ್ಲಿ ಕಠಿಣ ಲಾಕ್ ಡೌನ್ ನಿರ್ಬಂಧಗಳನ್ನು ವಿರೋಧಿಸಿ ಪ್ರತಿಭಟನೆಗಳು ತೀವ್ರಗೊಂಡಿದ್ದವು. ರಸ್ತೆಗಿಳಿದಿದ್ದ ಜನರು ಅಧ್ಯಕ್ಷ ಷಿ ಜಿನ್ಪಿಂಗ್ ರಾಜೀನಾಮೆಗೆ ಆಗ್ರಹಿಸಿದ್ದರು.
ಇದನ್ನೂ ಓದಿ: ಚೀನಾದಲ್ಲಿ ತಾರಕಕ್ಕೇರಿದ ಲಾಕ್ ಡೌನ್ ವಿರೋಧಿ ಪ್ರತಿಭಟನೆ; ಷಿ ಜಿನ್ಪಿಂಗ್ ರಾಜೀನಾಮೆಗೆ ಜನರ ಆಗ್ರಹ
ಪ್ರತಿಭಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಚೀನಾ ಸರ್ಕಾರ, ಕೋವಿಡ್-19 ಸೋಂಕು ಪತ್ತೆಯಾದಲ್ಲಿ ಅಪಾರ್ಟ್ ಮೆಂಟ್ ಕಾಂಪೌಂಡ್ ಗೆ ಪ್ರವೇಶ ನಿರ್ಬಂಧಿಸಲು ಗೇಟ್ ಗಳನ್ನು ಸ್ಥಾಪಿಸುವುದಿಲ್ಲ ಎಂದು ಹೇಳಿದೆ.
ಇದೇ ವೇಳೆ ಸರ್ಕಾರ ಶೂನ್ಯ ಕೋವಿಡ್-19 ನಿಲುವನ್ನು ಕಠಿಣವಾಗಿ ಪಾಲಿಸುವುದಾಗಿ ಹೇಳಿದ್ದು, ಸೋಂಕಿಗೆ ತುತ್ತಾದ ಪ್ರತಿ ವ್ಯಕ್ತಿಯನ್ನೂ ಐಸೊಲೇಟ್ ಮಾಡುವುದಾಗಿ ಹೇಳಿದೆ. ಆದರೆ ಕೆಲವು ಪ್ರದೇಶಗಳಲ್ಲಿರುವ ಜನರು ತಮ್ಮನ್ನು ಹಲವು ತಿಂಗಳುಗಳಿಂದ ಮನೆಗಳಿಗೆ ಸೀಮಿತಗೊಳಿಸಲಾಗಿದ್ದು, ತಮಗೆ ಸಮರ್ಪಕ ಆಹಾರ ದೊರೆಯುತ್ತಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ: ಭಾರತ ಹೊರತುಪಡಿಸಿ ಹಿಂದೂ ಮಹಾಸಾಗರದ 19 ರಾಷ್ಟ್ರಗಳೊಂದಿಗೆ ಚೀನಾ ಸಭೆ!
ಕ್ವಾರಂಟೈನ್ ಹಾಗೂ ಇತರ ನಿಯಮಗಳನ್ನು ಬದಲಾವಣೆ ಮಾಡುವ ಮೂಲಕ “ಶೂನ್ಯ ಕೋವಿಡ್ ಅಡಚಣೆಯನ್ನು ಕಡಿಮೆ ಮಾಡುವುದಾಗಿ ಕಳೆದ ತಿಂಗಳು ಭರವಸೆ ನೀಡಿದ್ದರು. ಆದರೆ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸಿದ್ದರ ಪರಿಣಾಮ ಸಾರ್ವಜನಿಕರು ರೊಚ್ಚಿಗೆದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ. ನ.27 ರಂದು ಚೀನಾದಲ್ಲಿ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ 40,347 ಕ್ಕೆ ಏರಿಕೆಯಾಗಿತ್ತು.