Astrology
oi-Sunitha B

ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಂದೇ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಅವರು ನುಡಿದಂತೆ ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷ ಬಹುಮತ ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಕೋಡಿಶ್ರೀಗಳು ನುಡಿದ ರಾಜಕೀಯ ಭವಿಷ್ಯ ನಿಜವಾಗಿದ್ದು ಅವರ ಮೇಲಿರುವ ನಂಬಿಕೆಗೆ ಮತ್ತಷ್ಟು ಬಲ ಬಂದಿದೆ.
ಬಹುತೇಕ ಕರಾರುವಕ್ಕಾಗಿ ಭವಿಷ್ಯ ನುಡಿಯುವುದರಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಯವರಿಗೆ ಉತ್ತಮ ಹೆಸರಿದೆ. ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯ ಬಗ್ಗೆ ಶ್ರೀಗಳು ನುಡಿದ ಭವಿಷ್ಯ ನಿಜವಾಗಿದೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ತಯಾರಿ ಭರದಿಂದ ಸಾಗುತ್ತಿತ್ತು. ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪ್ರಬಲ ಪಕ್ಷಗಳು ಪ್ರಚಾರ ಕಾರ್ಯಯವನ್ನು ಚುರುಕುಗೊಳಿಸಿದ್ದವು. ಈ ನಡುವೆ ರಾಜಕೀಯ ಭವಿಷ್ಯ ನುಡಿಯುವುದರಲ್ಲಿ ಮುಂಚುಣಿಯಲ್ಲಿರುವ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಗಳು ರಾಜಕೀಯ ಭವಿಷ್ಯವೊಂದನ್ನು ನುಡಿದಿದ್ದರು.
2022ರಲ್ಲಿ ಕೋಡಿಶ್ರೀಗಳು ನುಡಿದ ಭವಿಷ್ಯವೇನು, ಆಗಿದ್ದೇನು?
ರಾಜ್ಯದಲ್ಲಿ ಈವರೆಗೂ ಬಿಜೆಪಿ ಅಧಿಕಾರದಲ್ಲಿದೆ. ಇದಕ್ಕೂ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಆದರೆ ಮೈತ್ರಿ ಸರ್ಕಾರ ಕೆಡವುದರ ಮೂಲಕ ಬಿಜೆಪಿ ಅಧಿಕಾರ ಪಡೆದುಕೊಂಡಿದೆ ಎನ್ನುವ ಕಿಚ್ಚು ಈ ಬಾರಿ ಹೊತ್ತಿ ಉರಿಯಿತು. ಭ್ರಷ್ಟಾಚಾರದ ಆರೋಪ, 40% ಕಮಿಷನ್ ಹೀಗೆ ನಾನಾ ಆರೋಪಗಳನ್ನು ಹೊತ್ತಿದ್ದ ಬಿಜೆಪಿಯನ್ನು ಮಣಿಸುವಲ್ಲಿ ಕಾಂಗ್ರೆಸ್ ಪ್ರಯತ್ನ ವಿಫಲವಾಗಲೇ ಇಲ್ಲ. ಮತದಾನ ಪ್ರಭುಗಳು ಕಾಂಗ್ರೆಸ್ಗೆ ಈ ಬಾರಿ ಬಹುಮತ ನೀಡುವ ಮೂಲಕ ಜೈ ಎಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ 19, ಕಾಂಗ್ರೆಸ್ 136, ಬಿಜೆಪಿ 65 ಸ್ಥಾನಗಳನ್ನು ಪಡೆದುಕೊಂಡಿವೆ.

ಈ ನಡುವೆ ಕೋಡಿಶ್ರೀಗಳು ನುಡಿದ ರಾಜಕೀಯ ಭವಿಷ್ಯವನ್ನು ನೆನೆಯಲಾಗಿದೆ. ಅಷ್ಟಕ್ಕೂ ಚುನಾವಣಾ ಪೂರ್ವದಲ್ಲಿ ಕೋಡಿಶ್ರೀಗಳು ಹೇಳಿದ್ದೇನು? ಕೋಡಿಶ್ರೀಗಳು ಹೇಳಿದ ಆ ಒಂದು ಮಾತು ಹೀಗಿದೆ-‘ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದೆ. ಪಕ್ಷಗಳು ಕೂಡಿ ಹೋಗುವುದು ಕಷ್ಟ. ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ’ ಎಂದಿದ್ದಾರೆ.
ಇದೇ ವರ್ಷ ಫೆಬ್ರವರಿಯಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಮಾತನಾಡಿದ್ದ ಅವರು, ‘ಯುಗಾದಿ ನಂತರ ಪ್ರಕೃತಿ ವಿಕೋಪ ಆಗುತ್ತದೆ. ಆಗುವುದಿಲ್ಲ ಎಂದು ಹೇಳುವುದಿಲ್ಲ. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ. ಯಾರೇ ಆಗಲಿ ತಪ್ಪು ಇರಲಿ ಸರಿ ಇರಲಿ. ಬಿತ್ತಿದ್ದೆ ಬೆಳುಯುವುದು. ನಾವು ಏನ್ ಬಿತ್ತುತ್ತೇವೆ ಅದೆ ಬೆಳೆಯುತ್ತದೆ. ಮಾರಬಾರದು ಮಾಡಿದರೆ ಆರಬಾರದ್ದು ಆಗುತ್ತದೆ’ ಎಂದಿದ್ದರು.

ಜೊತೆಗೆ’ ಮುಂದೆ ಎಷ್ಟು ಸುಖವಿದೆಯೋ ಅಷ್ಟೇ ಕಷ್ಟವೂ ಇದೆ. ಒಲೆ ಹತ್ತಿ ಉರಿದರೆ ಆರಬಹುದು. ಆದರೆ ಧರೆ ಹೊತ್ತಿ ಉರಿದರೆ ಆರುವುದಿಲ್ಲ. ನಾನು ಹೇಳಿದ ಮರುದಿನವೇ ಪ್ಲೈಟ್ ಅಪಘಾತವಾಗಿದೆ. ಅದರಲ್ಲಿ ಐವತ್ತು ಜನ ಸತ್ತರು’ ಎಂದಿದ್ದರು.
ಈಗಾಗಲೇ ಶ್ರೀಗಳು ನುಡಿದ ರಾಜಕೀಯ ಹೊರತಾಗಿ ನುಡಿದ ಎಷ್ಟೋ ಭವಿಷ್ಯಗಳು ನಿಜವಾಗಿವೆ. ಆದರೆ ಯುಗಾದಿ ಬಳಿಕ ಆಗುವ ಸಮಸ್ಯೆಗಳೇನು? ಅದಿನ್ನು ಚಿಂತೆಗೀಡು ಮಾಡಿದೆ. ಈಗಾಗಲೇ ಮಾರ್ಚ್ ತಿಂಗಳಲ್ಲಿ ಯುಗಾದಿ ಮುಗಿದಿದೆ. ಇನ್ಯಾವ ಪ್ರಕೃತಿ ವಿಕೋಪಗಳು ಸಂಭವಿಸುತ್ತವೋ ಎನ್ನುವ ಆತಂಕ ಭಕ್ತರಲ್ಲಿ ಎದುರಾಗಿದೆ.
English summary
Kodimutt Seer Sri Shivananda Shivayogi Rajendra Swamiji Predictions came true that Single party will come to power in Karnataka in this year election. Read more.
Story first published: Sunday, May 14, 2023, 11:23 [IST]