Express News Service
ಕಿನಾರೆ ಮತ್ತು ಇನ್ನೂ ಬಿಡುಗಡೆಯಾಗದ ಕಾರ್ಗಿಲ್ ನೈಟ್ಸ್ ವೆಬ್ ಸರಣಿಯ ನಿರ್ದೇಶಕ ದೇವರಾಜ್ ಪೂಜಾರಿ ಅವರು ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಅವರ ಮುಂದಿನ ‘ಮತ್ಸ್ಯ ಗಂಧ’ ಸಿನಿಮಾ ನಿರ್ದೇಶನಕ್ಕೆ ಸಿದ್ಧರಾಗಿದ್ದಾರೆ. ಮತ್ಸ್ಯ ಗಂಧ ಚಿತ್ರದ ಫಸ್ಟ್ ಲುಕ್ ಸ್ಟಿಲ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ತಮ್ಮ ನಟನೆಯ ಬಹುತೇಕ ಸಿನಿಮಾಗಳಲ್ಲಿ ಕ್ಲಾಸ್ ಆಗಿದ್ದ ಪೃಥ್ವಿ ಈಗ ಈ ಚಿತ್ರದ ಮೂಲಕ ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಸಂಪೂರ್ಣ ಆ್ಯಕ್ಷನ್ ಸಿನಿಮಾವಾಗಿದೆ.
ದೂರದರ್ಶನ, ಪಾರ್ ರಿಜಿಸ್ಟ್ರೇಷನ್, ಲೈಫ್ ಈಸ್ ಬ್ಯೂಟಿಫುಲ್ ಸೇರಿದಂತೆ ಹಲವಾರು ಚಿತ್ರಗಳ ಬಿಡುಗಡೆಗೆ ಕಾಯುತ್ತಿದ್ದಾರೆ ಪೃಥ್ವಿ. ನಿರ್ದೇಶಕ ದರ್ಶನ್ ಅಪೂರ್ವ ಅವರೊಂದಿಗೆ ದಿಯಾ ಖ್ಯಾತಿಯ ಖುಷಿ ರವಿ ಅವರೊಂದಿಗೆ ಮತ್ತೆ ತೆರೆಹಂಚಿಕೊಳ್ಳಲಿರುವ ಸಿನಿಮಾದಲ್ಲಿಯೂ ಪೃಥ್ವಿ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್‌ನಲ್ಲಿ ಮತ್ಸ್ಯಗಂಧ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಮಿಲನಾ ನಾಗರಾಜ್- ಪೃಥ್ವಿ ಅಂಬರ್ ನಟನೆಯ ‘ಫಾರ್ ರಿಜಿಸ್ಟ್ರೇಷನ್’ ರಿಲೀಸ್ ಡೇಟ್ ಫಿಕ್ಸ್!
‘ನಾನು ವಿಭಿನ್ನ ಪ್ರಕಾರಗಳು ಮತ್ತು ಪಾತ್ರಗಳಲ್ಲಿ ನನ್ನ ಬಹುಮುಖತೆಯನ್ನು ಪರೀಕ್ಷಿಸಲು ಬಯಸುತ್ತೇನೆ. ಎರಡನೆಯದಾಗಿ, ಸಮರ ಕಲೆಯಲ್ಲಿ ತೊಡಗಿರುವ ನನ್ನ ಮೂಲಭೂತ ಶಕ್ತಿಯು ಯಾವಾಗಲೂ ಕಾರ್ಯರೂಪದಲ್ಲಿರುತ್ತದೆ ಮತ್ತು ಮತ್ಸ್ಯ ಗಂಧವು ಆ ಮುಖವನ್ನು ಪ್ರದರ್ಶಿಸುತ್ತದೆ. ಮತ್ಸ್ಯ ಗಂಧದಲ್ಲಿ ನಾನು ಮೊದಲ ಬಾರಿಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಪೃಥ್ವಿ ಹೇಳುತ್ತಾರೆ.
ರಮಣೀಯ ಪ್ರಕೃತಿಯ ಮಡಿಲಲ್ಲಿರುವ ಉತ್ತರ ಕನ್ನಡದ ಮಣ್ಣಿನಲ್ಲಿ ಕ್ರಿಯಾಶೀಲ, ಪ್ರತಿಭಾವಂತ ತಂಡದೊಂದಿಗೆ ರೋಚಕತೆ ತುಂಬಿರುವ ಕಥೆಯಲ್ಲಿ ನನ್ನೊಳಗಿರುವ ಹೊಸ ಆಯಾಮಕ್ಕೆ ಅದ್ಭುತ ಪಾತ್ರ ನಿರ್ವಹಿಸವ ಸದವಕಾಶ ನನಗೆ ದೊರಕಿದೆ. ನಮ್ಮ ಈ ಮತ್ಸ್ಯಗಂಧ ವಿನೂತನ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ, ಆಶೀರ್ವಾದ ಸದಾ ಇರಲಿ ಎಂದು ಪೃಥ್ವಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕಾಳಿಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ವೀರಾನಿಕಾ ಶೆಟ್ಟಿ, ಕಿರಣ್ ನಾಯ್ಕ್, ಪ್ರಶಾಂತ್ ಸಿದ್ದಿ, ಗಣಪತಿ, ನಟನಾ ಪ್ರಶಾಂತ್, ರಘು ಪಾಂಡೇಶ್ವರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.