ರಾಜಕೀಯ ವ್ಯಕ್ತಿಗಳು, ಸಾಧಕರ ಎಷ್ಟೋ ಬಯೋಪಿಕ್‌ಗಳು ತೆರೆ ಮೇಲೆ ಬಂದು ಕಮಾಲ್ ಮಾಡಿದೆ. ಈಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಯೋಪಿಕ್ ತಯಾರಿಯ ಕೂಗು ಕೇಳಿ ಬರುತ್ತಿದೆ. ಬೆಂಗಳೂರು: ರಾಜಕೀಯ ವ್ಯಕ್ತಿಗಳು, ಸಾಧಕರ ಎಷ್ಟೋ ಬಯೋಪಿಕ್‌ಗಳು ತೆರೆ ಮೇಲೆ ಬಂದು ಕಮಾಲ್ ಮಾಡಿದೆ. ಈಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಯೋಪಿಕ್ ತಯಾರಿಯ ಕೂಗು ಕೇಳಿ ಬರುತ್ತಿದೆ.
ಸದ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಬಯೋಪಿಕ್ ತೆರೆಮೇಲೆ ತರಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. ಗಾಂಧಿ ನಗರದ ಅಂಗಳದಲ್ಲಿ ಹರಿದು ಬಂದ ಈ ಸುದ್ದಿ ಕೇಳಿ ಸಿದ್ದರಾಮಯ್ಯ ಅಭಿಮಾನಿಗಳು ಖುಷಿಯಾಗಿದ್ದಾರೆ.
ಈ ಸಂಬಂಧ ಸಿದ್ದರಾಮಯ್ಯ ಬೆಂಬಲಿಗರು ಕಥೆ, ಚಿತ್ರಕಥೆ ಬರೆದಿಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಸಿದ್ದರಾಮಯ್ಯ ಅವರ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಸಿದ್ದು ಬೆಂಬಲಿಗರು ವಿಜಯ್ ಸೇತುಪತಿ ಅವರನ್ನು ಕಾಂಟ್ಯಾಕ್ಟ್ ಮಾಡಿದ್ದು, ಅದಕ್ಕೆ ವಿಜಯ್ ಸೇತುಪತಿ ಅವರು ಪ್ರಾಥಮಿಕ ಹಂತದಲ್ಲಿ ಓಕೆ ಎಂದಿದ್ದಾರಂತೆ. ಸತ್ಯರತ್ನಂ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ ಎನ್ನಲಾಗಿದೆ.
ಸಿದ್ದು ಬೆಂಬಲಿಗರ ಬಳಿ ಸಿನಿಮಾ ಮಾಡುವಷ್ಟು ಹಣ ಇಲ್ಲದ ಕಾರಣ, ಈಗ ನಿರ್ಮಾಪಕರ ಮೂಲಕವಾಗಿ ಬೆಂಬಲಿಗರು ಸಿದ್ದು ಬಯೋಪಿಕ್ ಮಾಡಲು ರೆಡಿ ಇದ್ದಾರೆ. ಈ ಚಿತ್ರಕ್ಕೆ ಶಾಸಕರೋರ್ವರು ಹಣ ಹೂಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಸಿನಿಮಾ ಆಗಲು ಸಿದ್ದರಾಮಯ್ಯ ಅವರ ಅನುಮತಿ ಬೇಕು. ಸಿದ್ದರಾಮಯ್ಯ ಅವರ ಬಳಿ ಒಮ್ಮೆ ಈ ಬಗ್ಗೆ ಚರ್ಚೆ ಮಾಡಲಾಗಿದ್ದು, ಆದರೆ ಅವರಿನ್ನೂ ಒಕೆ ಅಂತ ಹೇಳಿಲ್ಲ.
ಚುನಾವಣೆ ಸಲುವಾಗಿ ಈ ಸಿನಿಮಾ ಮಾಡುತ್ತಿಲ್ಲ, ಅವರ ಅಭಿಮಾನಿಗಳು ಈ ಸಿನಿಮಾ ಬರಬೇಕು ಎಂದು ಆಶಿಸುತ್ತಿದ್ದಾರೆ. ಚುನಾವಣೆಗಾಗಿ ಈ ರೀತಿ ಮಾಡಬೇಕಾದ ಅವಶ್ಯಕತೆಯಿಲ್ಲ. ಸಿದ್ದರಾಮಯ್ಯ ಜೀವನಚರಿತ್ರೆ, ರಾಜಕೀಯ ಜೀವನ ಈ ಸಿನಿಮಾದಲ್ಲಿ ಇರಲಿದೆ. ಸ್ಕ್ರಿಪ್ಟ್ ಅಂತೂ ತುಂಬ ಚೆನ್ನಾಗಿದೆ" ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ. <img src="https://media.kannadaprabha.com/uploads/user/imagelibrary/2022/11/29/w600X390/siddu-new.jpg" alt="ತೆರೆಮೇಲೆ ಸಿದ್ದರಾಮಯ್ಯ ಬಯೋಪಿಕ್: ಮಾಜಿ ಸಿಎಂ ಪಾತ್ರದಲ್ಲಿ ವಿಜಯ್ ಸೇತುಪತಿ? ಅಹಿಂದ ನಾಯಕನ ವರ್ಣರಂಜಿತ ಬದುಕು!" title="ತೆರೆಮೇಲೆ ಸಿದ್ದರಾಮಯ್ಯ ಬಯೋಪಿಕ್: ಮಾಜಿ ಸಿಎಂ ಪಾತ್ರದಲ್ಲಿ ವಿಜಯ್ ಸೇತುಪತಿ? ಅಹಿಂದ ನಾಯಕನ ವರ್ಣರಂಜಿತ ಬದುಕು!"