Associated Press
ದೋಹಾ: ಇದೇ ಮೊದಲ ಬಾರಿಗೆ ಕತಾರ್ ಫೀಫಾ ವಿಶ್ವಕಪ್ ಟೂರ್ನಿಯನ್ನು ಆಯೋಜನೆ ಮಾಡುತ್ತಿದ್ದು ಇಸ್ಲಾಮಿಕ್ ರಾಷ್ಟ್ರ ಮೇಲಿಂದ ಮೇಲೆ ಮುಜುಗರಕ್ಕೀಡಾಗುತ್ತಿದೆ.
ಆತಿಥೇಯ ಕತಾರ್ ನಲ್ಲಿ ತಂಡದ ಆರ್ಮ್‌ಬ್ಯಾಂಡ್‌ಗಳನ್ನು ಧರಿಸುವ ಯೋಜನೆಗೆ ಫೀಫಾ ನಿರ್ಬಂಧ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಕತಾರ್ ನಲ್ಲಿನ ತಾರತಮ್ಯವನ್ನು ವಿರೋಧಿಸಿ ಜರ್ಮನಿ ಆಟಗಾರರು ತಮ್ಮ ಆರಂಭಿಕ ವಿಶ್ವಕಪ್ ಪಂದ್ಯಕ್ಕೂ ಮುನ್ನ ತಮ್ಮ ತಂಡದ ಫೋಟೋಗಾಗಿ ಬಾಯಿ ಮುಚ್ಚಿಕೊಂಡು ಫೋಸ್ ನೀಡಿದರು.
ಜರ್ಮನ್ ತಂಡ ಇಂದು ಜಪಾನ್ ವಿರುದ್ಧ ಸೆಣೆಸಲಿದ್ದು ಇದಕ್ಕೂ ಮುನ್ನ ಸಾಲಾಗಿ ನಿಂತಿದ್ದ ಪ್ರತಿಯೊಬ್ಬ ಆಟಗಾರನು ತಮ್ಮ ಬಲಗೈಯಿಂದ ತಮ್ಮ ಬಾಯಿಯನ್ನು ಮುಚ್ಚಿಕೊಂಡು ಪೋಸ್ ನೀಡಿದರು.
ವೈವಿಧ್ಯತೆಯ ಸಂಕೇತವಾಗಿರುವ ವರ್ಣರಂಜಿತ ‘ಒನ್ ಲವ್’ ಆರ್ಮ್‌ಬ್ಯಾಂಡ್‌ಗಳನ್ನು ಧರಿಸಿದರೆ ಆಟಗಾರರಿಗೆ ದಂಡ ವಿಧಿಸಲಾಗುತ್ತದೆ ಎಂದು ಜರ್ಮನಿ ಸೇರಿದಂತೆ ಏಳು ಯುರೋಪಿಯನ್ ಫೆಡರೇಶನ್‌ಗಳಿಗೆ FIFA ಎಚ್ಚರಿಕೆ ನೀಡಿತ್ತು. ಏಳು ತಂಡದ ನಾಯಕರು ಆರ್ಮ್‌ಬ್ಯಾಂಡ್‌ಗಳನ್ನು ಧರಿಸಲು ಯೋಜಿಸಿದ್ದರು.
ಇದನ್ನೂ ಓದಿ: ಫೀಫಾ ವಿಶ್ವಕಪ್ ಉದ್ಘಾಟನೆಗೆ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ನನ್ನು ಆಹ್ವಾನಿಸಿಲ್ಲ: ಕತಾರ್
ಜರ್ಮನಿಯ ತರಬೇತುದಾರ ಹ್ಯಾನ್ಸಿ ಫ್ಲಿಕ್ ಮತ್ತು ಸಾಕರ್ ಫೆಡರೇಶನ್ ಅಧ್ಯಕ್ಷ ಬರ್ಂಡ್ ನ್ಯೂಯೆಂಡಾರ್ಫ್ ಫಿಫಾ ನಿರ್ಧಾರವನ್ನು ಟೀಕಿಸಿದವರಲ್ಲಿ ಪ್ರಮುಖರಾಗಿದ್ದಾರೆ.
ಫೀಫಾ ವಿಶ್ವಕಪ್ ಆಯೋಜಿಸುತ್ತಿರುವ ಕತಾರ್ ಹಲವು ನಿರ್ಬಂಧಗಳನ್ನು ಹೇರಿರುವುದು ಆಟಗಾರರು ಹಾಗೂ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.