Astrology
oi-Sunitha B

ಡಿಕೆಶಿ…. ಡಿಕೆಶಿ… ಇದೊಂದು ಹೆಸರು ಮೇ 13ರಿಂದ ಪ್ರತಿಯೊಬ್ಬರ ಬಾಯಲ್ಲೂ ಬರಲು ಆರಂಭಿಸಿದೆ. ಇದು ನಿಜಕ್ಕೂ ಡಿಕೆ ಶಿವಕುಮಾರ್ ಅವರು ಮಾಡಿದ ಕರಾಮತ್ತೇ ನಿಜ. ಸದ್ಯ ಸಿಎಂ ರೇಸ್‌ನಲ್ಲಿರುವ ಡಿಕೆ ಶಿವಕುಮಾರ್ ಅವರ ಬಗ್ಗೆ ಈ ಒಂದು ತಿಂಗಳ ಹಿಂದೆ ಜನ್ಮ ಕುಂಡಲಿ ಭವಿಷ್ಯ ನುಡಿಯಲಾಗಿತ್ತು. ಈ ಜನ್ಮ ಕುಂಡಲಿ ಭವಿಷ್ಯ ಸದ್ಯ ನಿಜವಾಗಿದೆ.
ಹೌದು.. ಈ ಬಾರಿ ಕಾಂಗ್ರೆಸ್ ಪಕ್ಷ ಬಹುಮತಗಳನ್ನು ಪಡೆದು ಅಧಿಕಾರದ ಗದ್ದುಗೆಗೆ ಏರಿದೆ. ಇದೊಂದು ಭಾರೀ ಮಟ್ಟದ ಗೆಲುವು. ಯಾಕೆಂದರೆ ಡಬಲ್ ಇಂಜಿನ್ ಸರ್ಕಾರದ ಕೇಂದ್ರ ಹಾಗೂ ವಿವಿಧ ರಾಜ್ಯಗಳ ಘಟಾನುಘಟಿ ನಾಯಕರು ಕರ್ನಾಟಕಕ್ಕೆ ಬಂದು ಭರ್ಜರಿ ಪ್ರಚಾರ ಮಾಡಿ, ಕೋಟ್ಯಾಂತರ ರೂಪಾಯಿ ಖರ್ಚು ಮಾಡುವುದು ಮಾತ್ರವಲ್ಲದೆ, ಈ ಬಾರಿ ಸರ್ಕಾರ ನಮ್ಮದೇ ಎಂದು ಬೀಗಿತ್ತು. ಆದರೆ ಜೈಲು, ಆರೋಪ, ಐಟಿ ದಾಳಿ ಇಂತೆಲ್ಲಾ ಸಂದಿಗ್ಧ ಕೆಸರಿನಲ್ಲಿ ಅರಳಿದ್ದು ಕಮಲವಲ್ಲ ಬದಲಿಗೆ ‘ಕೈ’ ಎನ್ನುವುದು ದೊಡ್ಡ ವಿಚಾರ.

ಹೀಗಾಗಿ ಕಾಂಗ್ರೆಸ್ ಈ ಬಾರಿ ಇತಿಹಾಸನ್ನೇ ಸೃಷ್ಟಿಸಿದೆ. ಇದಕ್ಕೆ ಕಾರಣರಾದ ಕಾಂಗ್ರೆಸ್‌ನ ಘಟಾನುಘಟಿ ನಾಯಕರಲ್ಲಿ ಡಿಕೆ ಶಿವಕುಮಾರ್ ಅವರ ಪಾತ್ರ ಮಹತ್ವದ್ದು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರ್ದೇಶನದಂತೆ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಾಥ್ ನೀಡಿ ಪಕ್ಷ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ನಾಯಕರಲ್ಲಿ ಡಿಕೆ ಶಿವಕುಮಾರ್ ಅವರ ಪಾತ್ರ ಸಣ್ಣದಲ್ಲ. ಅಂತೆಯೇ ಕನಕಪುರದಲ್ಲೂ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಪಕ್ಷ ಮುನ್ನಡೆಸುವ ಜವಬ್ದಾರಿಯೊಂದಿಗೆ ಡಿಕೆ ಶಿವಕುಮಾರ್ ತಮ್ಮ ಕ್ಷೇತ್ರದಲ್ಲೂ ಮತದಾನ ಪ್ರಭುಗಳ ಮನಗೆದ್ದಿದ್ದಾರೆ.
ಡಿಕೆ ಶಿವಕುಮಾರ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರಾಗಿ ಗುರುತಿಸಿಕೊಂಡವರು. ಹೀಗೆ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖರಾಗಿ ಗುರುತಿಸಿಕೊಂಡ ಡಿಕೆ ಶಿವಕುಮಾರ್ ಅವರ ಜನ್ಮ ಕುಂಡಲಿ ಆಧಾರದ ಮೇಲೆ ಈ ಇಂದು ತಿಂಗಳ ಹಿಂದೆ ಭವಿಷ್ಯ ನುಡಿಯಲಾಗಿತ್ತು.
ನಿಜವಾಯ್ತು ಡಿಕೆ ಶಿವಕುಮಾರ್ ಜನ್ಮ ಕುಂಡಲಿ ಭವಿಷ್ಯ
ಡಿಕೆ ಶಿವಕುಮಾರ್ ಅವರ ಮೇಷ ರಾಶಿ ಆಧಾರದ ಮೇಲೆ ಅವರ ಜನ್ಮ ಕುಂಡಲಿ ಅತ್ಯುತ್ತಮವಾಗಿತ್ತು. ಹೀಗಾಗಿ ಅವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುತ್ತಾರೆ ಎನ್ನಲಾಗಿತ್ತು. ಜನ್ಮ ಕುಂಡಲಿ ಆಧಾರದ ಮೇಲೆ ಡಿಕೆ ಶಿವಕುಮಾರ್ ಸದ್ಯ ತೀವ್ರ ಪೈಪೋಟಿ ನೀಡುವ ಮೂಲಕ ಬಿಜೆಪಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿ ಒಂದೇ ಹಂತದ ಮತದಾನ ಮೇ 10ರಂದು ನಡೆಯಿತು. ಮೇ 13ರಂದು ಮತ ಎಣಿಕೆ ಪ್ರಕ್ರಿಯೆ ಆರಂಭದಲ್ಲೇ ಡಿಕೆ ಶಿವಕುಮಾರ್ ಮುನ್ನಡೆ ಕಾಯ್ದುಕೊಂಡರು. ನಂತರದ ಹಾವು ಏಣಿ ಆಟದಲ್ಲಿ ಕೊನೆಗೆ ಜಯ ಸಿಕ್ಕಿದ್ದು ಡಿಕೆ ಶಿವಕುಮಾರ್ ಅವರಿಗೆ. ಬರೋಬ್ಬರಿ 1,22,392 ಮತಗಳನ್ನು ಪಡೆಯುವ ಮೂಲಕ ಡಿಕೆಶಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಒಂದು ತಿಂಗಳ ಹಿಂದೆ ನಡುದ ಡಿಕೆ ಶಿವಕುಮಾರ್ ಅವರ ಜನ್ಮ ಕುಂಡಲಿ ಪ್ರಕಾರ, ಶನಿಯ ಮಹಾದಶ ಶುಕ್ರ ಗ್ರಹದ ಅಂತರದಶ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಮೇಷ ರಾಶಿಯ ಹತ್ತನೇ ಮನೆಯಲ್ಲಿ ಶನಿ ನೆಲೆಸಿತ್ತು. ಶನಿಯ ಈ ಸ್ಥಾನ ತುಂಬಾ ಉತ್ತಮವಾಗಿತ್ತು. ಇದರೊಂದಿಗೆ ಹನ್ನೊಂದನೆ ಮನೆಯಲ್ಲಿ ಸ್ಥಾನ ಪಡೆದಿರುವ ಶುಕ್ರ ಗ್ರಹ ಉತ್ತಮ ಫಲಿತಾಂಶವನ್ನು ನೀಡಲಿದೆ ಎಂದು ಹೇಳಲಾಗಿತ್ತು. ಶನಿಯ ಮಹಾದಶ, ಶುಕ್ರ ಗ್ರಹದ ಅಂತರದಶ ನೋಡುವುದಾದರೆ ಡಿಕೆ ಶಿವಕುಮಾರ್ ಅವರ ಜನ್ಮ ಕುಂಡಲಿ ತುಂಬಾ ಪ್ರಬಲವಾಗಿತ್ತು.
DK Shivakumar Astrology : ಕನಕಪುರದ ಬಂಡೆಗೆ ಸರಿಸಾಟಿ ಯಾರು? ಡಿಕೆ ಶಿವಕುಮಾರ್ ರಾಜಕೀಯ ಭವಿಷ್ಯ ಹೇಗಿದೆ ಗೊತ್ತಾ?
ಶನಿಯ ಸ್ಥಾನದಿಂದ ಡಿಕೆ ಶಿವಕುಮಾರ್ ಅವರಿಗೆ ಹೆಚ್ಚಿನ ಲಾಭ ಸಿಗಲಿದೆ ಎಂದು ಹೇಳಲಾಗಿತ್ತು. ಡಿಕೆ ಶಿವಕುಮಾರ್ ಅವರ ಜನ್ಮ ಕುಂಡಲಿ ತುಂಬಾ ಚೆನ್ನಾಗಿದ್ದು ಬಿಜೆಪಿ ವಿರುದ್ಧ ಅವರು ಪ್ರಬಲ ಸ್ಪರ್ಧಿಯಾಗುವುದರಲ್ಲಿ ಎರಡು ಮಾತಿಲ್ಲ ಎನ್ನಲಾಗಿತ್ತು. ಡಿಕೆ ಶಿವಕುಮಾರ್ ಅವರ ಜನ್ಮ ಕುಂಡಲಿ ತುಂಬಾ ಚೆನ್ನಾಗಿದ್ದದ್ದೇ ಈ ಬಾರಿ ಅವರು ಜಯ ಸಾಧಿಸಲು ಸಾಧ್ಯವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಅವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ತೀವ್ರ ಪೈಪೋಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರ ಜನ್ಮ ಕುಂಡಲಿ ಜಾತಕ ಸದ್ಯ ನಿಜವಾಗಿದೆ.
ಜೊತೆಗೆ ಚುನಾವಣೆಯ ಬಳಿಕ ಡಿಕೆ ಶಿವಕುಮಾರ್‌ಗೆ ರಾಹುಲ್ ಗಾಂಧಿ ಕೇಂದ್ರ ಮಟ್ಟದಲ್ಲಿ ಹೆಚ್ಚಿನ ಜವಬ್ದಾರಿಯನ್ನೂ ನೀಡುವ ಸಾಧ್ಯತೆ ಇದೆ ಎಂದೂ ಕೂಡ ಜನ್ಮ ಕುಂಡಲಿಯಲ್ಲಿ ಹೇಳಲಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲಾಭವಾಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ಸದ್ಯ ಜನ್ಮ ಕುಂಡಲಿಯಂತೆ ಡಿಕೆ ಶಿವಕುಮಾರ್ ಜಯ ಸಾಧಿಸಿದ್ದಾರೆ. ಕೇಂದ್ರ
English summary
According to astrologers, DK Shivakumar astrology predictions come true of karnataka assembly election 2023 And know what his Kundali says about his future.
Story first published: Sunday, May 14, 2023, 15:03 [IST]