PTI
ಮುಜಾಫರ್‌ನಗರ: 2012ರಲ್ಲಿ ಪ್ರತಿಭಟನೆಯ ವೇಳೆ ರೈಲು ಸೇವೆಗೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಉತ್ತರ ಪ್ರದೇಶ ಸಚಿವ ಕಪಿಲ್ ದೇವ್ ಅಗರ್ವಾಲ್ ಮತ್ತು ಇತರ ಏಳು ಬಿಜೆಪಿ ನಾಯಕರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ.
ಅಗರ್ವಾಲ್ ಮತ್ತು ಇತರ ಆರೋಪಿಗಳಾದ, ಮಾಜಿ ಶಾಸಕರಾದ ಅಶೋಕ್ ಕನ್ಸಾಲ್ ಮತ್ತು ಉಮೇಶ್ ಮಲಿಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ವಿಜಯ್ ಶುಕ್ಲಾ, ಮಾಜಿ ಜಿಲ್ಲಾಧ್ಯಕ್ಷ ಪವನ್ ಟ್ರಾರ್ ಮತ್ತು ಯಶಪಾಲ್ ಪವಾರ್; ವಭವ್ ತ್ಯಾಗಿ ಮತ್ತು ಸುನಿಲ್ ತಾಯಲ್ ಅವರನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಇದನ್ನು ಓದಿ: ನ.18 ರಿಂದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಸಂಪುಟ ಸಹೋದ್ಯೋಗಿಗಳ ವಿದೇಶ ಪ್ರವಾಸ
ವಿಶೇಷ ನ್ಯಾಯಾಧೀಶ ಮಯಾಂಕ್ ಅಗರ್ವಾಲ್ ಅವರು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.
ಪ್ರಾಸಿಕ್ಯೂಷನ್ ಅಧಿಕಾರಿ ನೀರಜ್ ಸಿಂಗ್ ಅವರ ಪ್ರಕಾರ, ಸೆಪ್ಟೆಂಬರ್ 3, 2012 ರಂದು ಮುಜಾಫರ್‌ನಗರ ರೈಲು ನಿಲ್ದಾಣದಲ್ಲಿ ರೈಲು ಸಂಚಾರಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಅಗರ್ವಾಲ್ ಸೇರಿದಂತೆ 12 ಜನರ ವಿರುದ್ಧ ಪೊಲೀಸರು ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಈ ಆರೋಪಿಗಳು ಭಾಗವಹಿಸಿದ್ದರು.