Astrology
oi-Sunitha B

ಪ್ರತಿಯೊಂದು ರಾಶಿಯವರು ಕೆಲವು ಒಳ್ಳೆಯ ಗುಣಗಳು ಮತ್ತು ಕೆಲವು ಕೆಟ್ಟ ಗುಣಗಳನ್ನು ಹೊಂದಿರುತ್ತಾರೆ. ಆದರೆ ಕೆಲವು ರಾಶಿಯವರು ಹೆಚ್ಚು ಕೆಟ್ಟ ಗುಣಗಳನ್ನು ಹೊಂದಿ ಮತ್ತೊಬ್ಬರಿಗೆ ನೋವನ್ನುಂಟು ಮಾಡುತ್ತಾರೆ. ಯಾವ ರಾಶಿಚಕ್ರದ ಚಿಹ್ನೆಗಳು ಅಂತಹ ಅಪಾಯಕಾರಿ ದುಷ್ಟ ಗುಣಗಳನ್ನು ಹೊಂದಿವೆ ಎಂಬುದನ್ನು ತಿಳಿಯಲು ಜ್ಯೋತಿಷ್ಯ ಸಹಾಯ ಮಾಡುತ್ತದೆ. ಇದು ನಿಮ್ಮಲ್ಲಿರುವ ನಕಾರಾತ್ಮಕ ಗುಣಗಳನ್ನು ಅರಿತು ವ್ಯವಹರಿಸಲು ಸಹಾಯ ಮಾಡುತ್ತದೆ.

ಮಹಿಳೆಯರು ಸ್ವಾಭಾವಿಕವಾಗಿ ಸೌಮ್ಯ ಮತ್ತು ತಾಳ್ಮೆಯಿಂದಿರುತ್ತಾರೆ. ಆದರೆ ಅಸೂಯೆ ಮತ್ತು ಕೋಪಗೊಂಡಾಗ ಅವರು ಕ್ರೂರಿಯಾಗಿ ದುಷ್ಟರಾಗುತ್ತಾರೆ. ಕೆಲವು ರಾಶಿಯಲ್ಲಿ ಜನಿಸಿದ ಮಹಿಳೆಯರು ತುಂಬಾ ಸ್ವಾರ್ಥಿಗಳು ಮತ್ತು ದುಷ್ಟರು ಎಂದು ಜ್ಯೋತಿಷ್ಯ ಹೇಳುತ್ತದೆ. ಹಾಗಾದರೆ ಆ ರಾಶಿಯ ಮಹಿಳೆಯರು ಯಾರು?

ವೃಶ್ಚಿಕ ರಾಶಿ
ಕ್ರೂರ ರಾಶಿಗಳ ಪಟ್ಟಿಯಲ್ಲಿ ವೃಶ್ಚಿಕ ರಾಶಿ ಅಗ್ರಸ್ಥಾನದಲ್ಲಿದೆ. ಇದು ಎಲ್ಲಾ ಚಿಹ್ನೆಗಳಲ್ಲಿ ಅತ್ಯಂತ ತೀವ್ರವಾದ ಮತ್ತು ಭಾವನಾತ್ಮಕವಾದ ರಾಶಿಯಾಗಿದೆ. ವೃಶ್ಚಿಕ ರಾಶಿಯವರ ಆಲೋಚನೆಗಳು ಸಾಮಾನ್ಯವಾಗಿ ತಪ್ಪು ದಿಕ್ಕಿನಲ್ಲಿ ತಿರುಗುತ್ತವೆ. ಆಗಾಗ್ಗೆ ಈ ರಾಶಿಯವರು ದ್ವೇಷ ಮತ್ತು ಸಿನಿಕತನವಾಗಿ ಬದಲಾಗಬಹುದು.
ಏನೇ ಆಗಲಿ ಅವರು ಅವದನ್ನು ಸಂಕುಚಿತವಾಗಿ ನೋಡಬಹುದು. ಒಂದು ವೇಳೆ ಅವರು ಬಯಸಿದ್ದನ್ನು ಪಡೆಯದಿದ್ದರೆ ಅವರು ನಿರ್ದಯವಾಗಿ ಕ್ರೂರರಾಗಬಹುದು. ಕ್ಷಮಿಸುವ ಅಥವಾ ಮರೆಯುವ ಸಾಮರ್ಥ್ಯ ಈ ರಾಶಿಯವರಲ್ಲಿ ಅವರಲ್ಲಿರುವುದಿಲ್ಲ. ಈ ರಾಶಿಚಕ್ರದ ಮಹಿಳೆಯರು ಯಾವಾಗಲೂ ತಮ್ಮ ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಬಯಸುತ್ತಾರೆ. ಹೀಗಾಗಿ ಈ ವೃಶ್ಚಿಕ ರಾಶಿ ಅತ್ಯಂತ ಕ್ರೂರ ರಾಶಿಚಕ್ರ ಚಿಹ್ನೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.

ಕರ್ಕಾಟಕ
ಕರ್ಕಾಟಕ ರಾಶಿ ಅತ್ಯಂತ ದಯೆಯಿಲ್ಲದ ರಾಶಿಯಲ್ಲಿ ಒಂದು. ಕರ್ಕಾಟಕ ರಾಶಿಯ ಮಹಿಳೆಯರ ಭಾವನೆಗಳು ಅಗತ್ಯಕ್ಕಿಂತ ಹೆಚ್ಚು ಪ್ರತಿಕ್ರಿಯಾತ್ಮಕವಾಗಿರುತ್ತವೆ. ಅವರು ಬೆದರಿಕೆಯನ್ನು ಅನುಭವಿಸಿದರೆ ಅಥವಾ ಅವರಿಗೆ ಹತ್ತಿರವಿರುವ ಯಾವುದನ್ನಾದರೂ ಕಳೆದುಕೊಳ್ಳುವ ಭಯವಿದ್ದರೆ ಅವರು ನಿಸ್ಸಂಶಯವಾಗಿ ಬಹಳ ಕೋಪಗೊಳ್ಳಬಹುದು.
ಅವರು ಈ ರೀತಿ ಕೋಪಗೊಂಡಾಗ ತುಂಬಾ ಕೆಟ್ಟದಾಗಿ ವರ್ತಿಸಬಹುದು ಅಥವಾ ನಿರ್ದಯರಾಗಬಹುದು. ನಂತರ ಅವರು ಅವರು ಮಾಡಿದ ಭಯಾನಕ ಕಾರ್ಯಗಳಿಗೆ ವಿಷಾದಿಸಬಹುದು. ಆದರೆ ಅಷ್ಟರೊಳಗೆ ಅವರು ಅನೇಕ ಸಂಬಂಧಗಳನ್ನು ಕಳೆದುಕೊಂಡಿರುತ್ತಾರೆ.

ಮಕರ ರಾಶಿ
ಮಕರ ರಾಶಿಯ ಮಹಿಳೆಯರು ಸಹ ಅಸಮಾನ್ಯ ಕೋಪವನ್ನು ಹೊಂದಿದ್ದಾರೆ. ಈ ಗುಣವನ್ನು ಪ್ರದರ್ಶಿಸುವ ಸಮಯ ಬಂದಾಗ ಅವರು ಯಾರ ಮಾತನ್ನೂ ಕೆಲುವುದಿಲ್ಲ. ಅವರು ತಮ್ಮ ಶತ್ರುಗಳೊಂದಿಗೆ ಸೇಡು ತೀರಿಸಿಕೊಳ್ಳಲು ಅಥವಾ ತಮ್ಮ ಪ್ರತಿಸ್ಪರ್ಧಿಗಳನ್ನು ಸೋಲಿಸಲು ಯಾವುದೇ ಹಂತಕ್ಕೂ ಬೇಕಾದರೂ ಹೋಗುತ್ತಾರೆ. ಇದರಲ್ಲಿ ಯಾವುದೇ ಅವಮಾನವಿಲ್ಲ. ಅವರಿಗೆ ಯಾವುದೇ ಸಹಾನುಭೂತಿ ಇರುವುದಿಲ್ಲ ಮತ್ತು ಅವರ ದುಃಖದಲ್ಲಿ ಇತರರಿಗೆ ಸಹಾಯ ಮಾಡುವ ಬದಲು ಅವರು ತಮ್ಮ ದುಃಖದಲ್ಲಿ ದು:ಖವನ್ನೇ ನೋಡಲು ಬಯಸುತ್ತಾರೆ.

ಮೇಷ ರಾಶಿ
ಮೇಷ ರಾಶಿಯ ಮಹಿಳೆಯರು ಕೋಪಗೊಂಡಾಗ ಅಥವಾ ಅಸಮಾಧಾನಗೊಂಡಾಗ ಅವರು ತುಂಬಾ ಕ್ರೂರವಾಗಿ ವರ್ತಿಸಬಹುದು ಮತ್ತು ಮಾತಿನಲ್ಲಿ ನಿಂದನೀಯರಾಗಬಹುದು. ಅವರು ತುಂಬಾ ಸ್ಪರ್ಧಾತ್ಮಕರಾಗಿದ್ದಾರೆ. ಇದರಿಂದ ಸೊಲು ಕಂಡಾಗ ಮೇಷ ರಾಶಿಯವರನ್ನು ಆಳವಾಗಿ ನೋಯಿಸಬಹುದು. ಒಮ್ಮೆ ಅವರು ಗೆದ್ದರೆ, ಅವರು ತಮ್ಮ ಎದುರಾಳಿಗಳನ್ನು ಗರಿಷ್ಠ ಮಟ್ಟಿಗೆ ಹಿಂಸಿಸುತ್ತಾರೆ. ವಿಜಯವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅವರು ಹಾಗೆ ಆಚರಿಸಿ ಅವರ ಶತ್ರುಗಳು ಬೇಸರಗೊಳ್ಳುವಂತೆ ಮಾಡುತ್ತಾರೆ.

ಸಿಂಹ ರಾಶಿ
ಸಿಂಹ ರಾಶಿಯ ಮಹಿಳೆಯರು ಯಾವಾಗಲೂ ಸ್ಪಾಟ್ಲೈಟ್ ಅನ್ನು ಪ್ರೀತಿಸುತ್ತಾರೆ. ಅವರು ತುಂಬಾ ಆಕರ್ಷಕವಾಗಿದ್ದು, ಯಾರೂ ಅವರನ್ನು ಪ್ರೀತಿಸದೆ ಇರಲು ಸಾಧ್ಯವಿಲ್ಲ. ಆದರೆ ಅವರ ಗಮನವನ್ನು ಯಾರಾದರು ಕದಿಯುತ್ತಿದ್ದರೆ, ಅಂತವರನ್ನು ಅವರು ಹರಿದು ಮುಕ್ಕಿಬಿಡುತ್ತಾರೆ. ರಾಜತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಹೇಗೆ ಸರಿಯಾಗಿರಬೇಕೆಂದು ಸಿಂಹ ರಾಶಿಯವರು ತಿಳಿದಿದ್ದಾರೆ. ತಮ್ಮ ಎದುರಾಳಿಗಳನ್ನು ದುರ್ಬಲಗೊಳಿಸುವುದು ಅಥವಾ ಗಾಯಗೊಳಿಸುವುದು ಅವರಿಗೆ ನಿಖರವಾಗಿ ತಿಳಿದಿದೆ.
English summary
Astrology says that 5 zodiac women have no mercy. So what are those constellations? Learn about this in Kannada.
Story first published: Wednesday, May 24, 2023, 13:44 [IST]