ಸೋಷಿಯಲ್ ಮೀಡಿಯಾ ಪ್ರಭಾವ ಕಳೆದೊಂದು ದಶಕದಿಂದ ಅಗಾಧವಾಗಿದೆ. ಈಗೇನಿದ್ದರೂ ಸೋಷಿಯಲ್ ಮೀಡಿಯಾ ಜಮಾನ, ಹಾಗೆಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೊ ಪೋಸ್ಟ್ ಮಾಡುವಾಗ, ಬರೆಯುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಎಡವಟ್ಟುಗಳಾಗುವುದು ನಿಶ್ಚಿತ. ನದ್ಮದಪುರಂ(ಮಧ್ಯ ಪ್ರದೇಶ): ಸೋಷಿಯಲ್ ಮೀಡಿಯಾ ಪ್ರಭಾವ ಕಳೆದೊಂದು ದಶಕದಿಂದ ಅಗಾಧವಾಗಿದೆ. ಈಗೇನಿದ್ದರೂ ಸೋಷಿಯಲ್ ಮೀಡಿಯಾ ಜಮಾನ, ಹಾಗೆಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೊ ಪೋಸ್ಟ್ ಮಾಡುವಾಗ, ಬರೆಯುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಎಡವಟ್ಟುಗಳಾಗುವುದು ನಿಶ್ಚಿತ.
ಬಾಲಿವುಡ್ ನಟಿ ರವೀನಾ ಟಂಡನ್ ಇತ್ತೀಚೆಗೆ ಮಧ್ಯ ಪ್ರದೇಶದ ಸತ್ಪುರ ಹುಲಿ ಅಭಯಾರಣ್ಯಕ್ಕೆ ಹೋಗಿ ಅಲ್ಲಿನ ಸೊಂಪಾದ ಹಸಿರು ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಮನಸೋತರು. ಅಲ್ಲಿ ಸೆರೆಹಿಡಿದ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರು. ಅಲ್ಲಿ ಸಫಾರಿ ಹೋಗುತ್ತಿದ್ದಾಗ ಹುಲಿಯ ಪಕ್ಕದಲ್ಲಿ ಸಾಗಿ ಸೆರೆಹಿಡಿದ ವಿಡಿಯೊವಾಗಿದೆ.
ಈ ವಿಡಿಯೊದಲ್ಲಿ ಸಫಾರಿ ವಾಹನ ಹುಲಿಯ ಅತ್ಯಂತ ಸಮೀಪಕ್ಕೆ ಹೋಗಿದೆ. ಕ್ಯಾಮರಾ ಶಟರ್ ನ ಸದ್ದು ವಿಡಿಯೊದಲ್ಲಿ ಕೇಳಿಸುತ್ತದೆ. ಹುಲಿ ಮನುಷ್ಯರೆಡೆಗೆ ನೋಡಿ ಘರ್ಜಿಸುತ್ತದೆ. ರವೀನಾ ಅವರು ಪೋಸ್ಟ್ ಮಾಡಿದ ಈ ವಿಡಿಯೊ ವೈರಲ್ ಆಗಿದ್ದೇ ತಡ ಅದನ್ನು ನೋಡಿದ ವನ್ಯ ಸಂರಕ್ಷಣಾಧಿಕಾರಿಗಳು ಅಸಮಾಧಾನಗೊಂಡು ತನಿಖೆಗೆ ಆದೇಶ ನೀಡಿದ್ದಾರೆ.
Got beautiful shots of sharmilee and her cubs in Tadoba. Wildlife shots are unpredictable due to the unreadable nature of our https://t.co/JQSB9ylxlO tries to be as silent and capture the best moments. Video Shot on Sony Zoom lense 200/400. pic.twitter.com/LsUOn2XtYs
— Raveena Tandon (@TandonRaveena) November 29, 2022
ಹೀಗೆ ಅಭಯಾರಣ್ಯದಲ್ಲಿ ಸಫಾರಿ ಹೋಗುವಾಗ ಮನುಷ್ಯರ ಪ್ರಾಣಿಗಳ ಅತ್ಯಂತ ಸಮೀಪಕ್ಕೆ ಹೋದರೆ ಅದು ವಿಚಲಿತವಾಗಿ ಯಾವುದೇ ಅಹಿತಕರ ಘಟನೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ರವೀನಾ ಅವರು ಹುಲಿಯ ಅತ್ಯಂತ ಸಮೀಪಕ್ಕೆ ಹೇಗೆ ಹೋದರು, ಅವರನ್ನು ಏಕೆ ಕರೆದುಕೊಂಡು ಹೋದರು ಎಂದು ಪ್ರಶ್ನಿಸಿ ಸಫಾರಿಯ ಚಾಲಕ ಮತ್ತು ಅಲ್ಲಿನ ಕರ್ತವ್ಯನಿರತ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ.
#bandhavgarh pic.twitter.com/l4ENp4jJ3P
— Raveena Tandon (@TandonRaveena) November 28, 2022
ಈ ಬಗ್ಗೆ ಪ್ರತಿಕ್ರಿಯಿಸಿರುವ ಸತ್ಪುರ ಹುಲಿ ಅಭಯಾರಣ್ಯದ ಉಪ ನಿರ್ದೇಶಕ ಸಂದೀಪ್ ಫೆಲೋಜ್, ರವೀನಾ ಟಂಡನ್ ಹುಲಿ ಅಭಯಾರಣ್ಯಕ್ಕೆ ಬಂದು ಸಫಾರಿ ಹೋಗಿದ್ದರು. ಈ ಬಗ್ಗೆ ತನಿಖೆ ನಡೆಸಲಾಗುವುದು. ರವೀನಾ ಅವರನ್ನು ಸಫಾರಿ ಕರೆದುಕೊಂಡ ಹೋದ ಚಾಲಕ ಮತ್ತು ಮಾರ್ಗದರ್ಶಕನ ಬಗ್ಗೆ ಪ್ರತ್ಯೇಕ ತನಿಖೆ ನಡೆಸಲಾಗುವುದು ಎಂದರು.
ರವೀನಾ ಕ್ಯಾಮರಾಕ್ಕೆ ಸೆರೆಸಿಕ್ಕ ವಿಷಯ ಮಾಧ್ಯಮಗಳಲ್ಲಿಯೂ ಪ್ರಸಾರವಾಗಿದೆ. ತನಿಖೆಗೆ ಆದೇಶಿಸಿದ ನಂತರವೂ ರವೀನಾ ಸೋಷಿಯಲ್ ಮೀಡಿಯಾದಿಂದ ಪೋಸ್ಟ್ ಡಿಲೀಟ್ ಮಾಡಿಲ್ಲ. ಅದೃಷ್ಟವಶಾತ್ ನಮಗೆ ಈ ದೃಶ್ಯ ಸೆರೆಸಿಕ್ಕಿದೆ. ನಾವು ಸಡನ್ ಆಗಿ ತೆಗೆದ ವಿಡಿಯೊ ಅಲ್ಲ, ಸ್ವಲ್ಪ ಹೊತ್ತು ಸ್ತಬ್ಧವಾಗಿ ಕುಳಿತು ಹುಲಿಯನ್ನು ನೋಡುತ್ತಾ ಸಾಗಿದೆವು. ಹುಲಿ ಸಫಾರಿ ವಾಹನಗಳ ಹತ್ತಿರ ಬಂದು ಕೂಗುವುದು ಅವುಗಳಿಗೆ ಅಭ್ಯಾಸವಾಗಿದೆ ಎಂದು ರವೀನಾ ಬರೆದುಕೊಂಡಿದ್ದಾರೆ.
Luckily for us ,that we did not take any sudden action, but sat quiet and watched the tigress, move on.We we’re on the tourism path, which mostly these tigers cross. And Katy the tigress in this video aswell, is habituated to coming close to vehicles and snarling. pic.twitter.com/gNPBujbfBP
— Raveena Tandon (@TandonRaveena) November 30, 2022
<img src="https://media.kannadaprabha.com/uploads/user/imagelibrary/2022/11/30/w600X390/raveena.jpg" alt="' ಇಲ್ನೋಡಿ ಹುಲಿ-ಅದರ ಮರಿ ಎಷ್ಟು ಸುಂದರವಾಗಿ ಸೆರೆಸಿಕ್ಕಿದೆ' ಎಂದು ವಿಡಿಯೊ ಪೋಸ್ಟ್ ಮಾಡಿದ ರವಿನಾ ಟೆಂಡನ್ ಗೆ ಸಂಕಷ್ಟ, ತನಿಖೆಗೆ ಆದೇಶ" title="' ಇಲ್ನೋಡಿ ಹುಲಿ-ಅದರ ಮರಿ ಎಷ್ಟು ಸುಂದರವಾಗಿ ಸೆರೆಸಿಕ್ಕಿದೆ' ಎಂದು ವಿಡಿಯೊ ಪೋಸ್ಟ್ ಮಾಡಿದ ರವಿನಾ ಟೆಂಡನ್ ಗೆ ಸಂಕಷ್ಟ, ತನಿಖೆಗೆ ಆದೇಶ"