Online Desk
ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ಫುಟ್ಬಾಲ್ ತಂಡವೆಂದು ಪರಿಗಣಿಸಲ್ಪಟ್ಟ ಅರ್ಜೆಂಟೀನಾವನ್ನು ಸೌದಿ ಅರೇಬಿಯಾ ತಂಡ ಸೋಲಿಸಿತ್ತು. ಇದೀಗ ಆ ಆಟಗಾರರಿಗೆ ಸೌದಿ ಅರೇಬಿಯಾ ದೊಡ್ಡ ಉಡುಗೊರೆಯನ್ನು ನೀಡುತ್ತಿದೆ.
ಈ ಗೆಲುವು ಈ ದೇಶದ ಅಭಿಮಾನಿಗಳಿಗೂ ಅಷ್ಟೇ ಮಹತ್ವದ್ದಾಗಿದ್ದು ಅವರ ಆಚರಣೆಯೂ ಭರ್ಜರಿಯಾಗಿತ್ತು. ಇದೀಗ ಪಂದ್ಯ ಗೆದ್ದ ಮೂರು ದಿನಗಳ ನಂತರ ಸೌದಿ ತನ್ನ ಆಟಗಾರರಿಗೆ ಈ ಗೆಲುವಿಗೆ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಲಿದೆ ಎಂಬ ಸುದ್ದಿ ಬಂದಿದೆ.
ರೋಲ್ಸ್ ರಾಯ್ಸ್ ಕಾರುಗಳು ಜಗತ್ತಿನಲ್ಲಿ ರಾಯಲ್ಟಿ ಎಂದು ಪರಿಗಣಿಸಲ್ಪಟ್ಟ ಕಾರು. ಇದರ ಯಾವುದೇ ಹೊಸ ಅಥವಾ ಹಳೆಯ ಮಾದರಿಯ ಬೆಲೆ ಕೋಟಿಗಳಲ್ಲಿದೆ. ಮಾಧ್ಯಮ ವರದಿಗಳ ಪ್ರಕಾರ, ಅರ್ಜೆಂಟೀನಾ ವಿರುದ್ಧ ಸೌದಿ ವಿಜಯದ ನಂತರ, ದೇಶದ ರಾಜಕುಮಾರ ಮೊಹಮ್ಮದ್ ಬಿನ್ ಸಲಾಮ್ ಅಲ್ ಸೌದ್ ತನ್ನ ಪ್ರತಿಯೊಬ್ಬ ಆಟಗಾರನಿಗೆ ಒಂದು ರೋಲ್ಸ್ ರಾಯ್ಸ್ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.
Saudi Arabia players to get a Rolls-Royce each for defeating Argentina.
Wow pic.twitter.com/AY3fPQQkWi
— FootballFunnys (@FootballFunnnys) November 25, 2022
FIFA ವಿಶ್ವಕಪ್ 2022 ಅನ್ನು ಅನುಸರಿಸುತ್ತಿರುವ ಅಭಿಮಾನಿಗಳು ಮೆಸ್ಸಿಯ ಗೋಲಿನ ಹೊರತಾಗಿಯೂ ಸೌದಿ ಅರ್ಜೆಂಟೀನಾವನ್ನು 2-1 ರಿಂದ ಹೇಗೆ ಸೋಲಿಸಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ಈ ಪಂದ್ಯದಲ್ಲಿ ಅರ್ಜೆಂಟೀನಾ ಮೊದಲ ಗೋಲು ದಾಖಲಿಸಿತು. ಮೊದಲಾರ್ಧದಲ್ಲಿ ಬಲಿಷ್ಠ ಆಟ ತೋರಿದರೂ ದ್ವಿತೀಯಾರ್ಧದಲ್ಲಿ ಅರ್ಜೆಂಟೀನಾ ತಂಡಕ್ಕೆ ಕಮ್ ಬ್ಯಾಕ್ ಮಾಡಲಾಗಲಿಲ್ಲ. ಸೌದಿ ಗೋಲ್ ಕೀಪರ್ ಓವೈಸ್ ಈ ಗೆಲುವಿನ ಹೀರೋ ಆಗಿದ್ದರು. ಅರ್ಜೆಂಟೀನಾದ ನಿರಂತರ ದಾಳಿಯನ್ನು ನಿಲ್ಲಿಸಿ ಅಂತಿಮವಾಗಿ ಅವರು ತಮ್ಮ ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರವಹಿಸಿದ್ದರು.